ಪೆರ್ಡೂರು : ಯುವಕ ಸಂಘ ( ರಿ) ಪೆರ್ಡೂರು ಅಂದು ಆರಂಭಿಸಿದ ಗಣೇಶೋತ್ಸವ ಈಗ 49 ವರ್ಷಗಳ ನಿರಂತರ ಪಯಣವನ್ನು ಪೂರೈಸಿ ಇದೀಗ ಸುವರ್ಣ ಸಂಭ್ರಮದಲ್ಲಿದೆ. ಯುವಕ ಸಂಘ (ರಿ) ಪೆರ್ಡೂರಿನ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವವು ಇದೇ 14ರಿಂದ 18 ರ ತನಕ 5 ದಿನಗಳ ಕಾಲ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ಅಂದು 1976ರಲ್ಲಿ ಪ್ರಥಮ ವರ್ಷದಲ್ಲಿ ಅಧ್ಯಕ್ಷರಾಗಿದ್ದ ಕೆ. ಶಾಂತಾರಾಮ ಸೂಡ ಅವರೇ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವುದು ವಿಶೇಷವಾಗಿದೆ. ಸುವರ್ಣ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಲು ಶ್ರೀಗಣಪತಿಯ ಬೆಳ್ಳಿಯ ಕಿರೀಟ, ಪ್ರಭಾವಳಿ ಹಾಗೂ ಕರ್ಣಕುಂಡಲಗಳಿಗೆ ಚಿನ್ನದ ಲೇಪನ ಮಾಡಿ ದೇವರಿಗೆ ಸುವರ್ಣ ಸಂಭ್ರಮದಲ್ಲಿ ಸಮರ್ಪಿಸಲಾಗುತ್ತದೆ.
ಗಣೇಶ ಕ್ರೀಡಾ ವೈಭವ ವಿಶೇಷ ಕಾರ್ಯಕ್ರಮ, ಸುವರ್ಣ ಸಂಭ್ರಮ ಪುರವೈಭವ, ಕಲಾ ಕೌಮುದಿ, ಸಂಸ್ಕೃತಿ ಸಿಂಚನ, ಸುರ ಸೌರಭ ಮತ್ತು ವಿಸರ್ಜನಾ ವೈಭವ ಪರಿಕಲ್ಪನೆಯಲ್ಲಿ 5 ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳು ಪೆರ್ಡೂರು ಗಣೇಶೋತ್ಸವ ಸವರ್ಣ ಸಂಭ್ರಮದ ವೈಭವ ಹೆಚ್ಚಿಸಲಿದೆ. ಊರಪರವೂರ ಭಕ್ತರ ವಿಶೇಷ ಸಹಕಾರದಲ್ಲಿ ಗಣೇಶೋತ್ಸವ ಸಂಭ್ರಮ ನಡೆಯಲಿದೆ. ಸಂತೋಷ ಕುಲಾಲ್ ಪಕ್ಕಾಲ್ ಪ್ರಧಾನ ಕಾರ್ಯದರ್ಶಿಯಾಗಿ, ವಿಶ್ವಾಸ್ ಶೆಟ್ಟಿ ಕಾರ್ಯದರ್ಶಿಯಾಗಿ, ಹರೀಶ ಎಸ್ ಶೆಟ್ಟಿ ಬಾಳೆಬೈಲು ಕೋಶಾಧಿಕಾರಿಯಾಗಿ, ವಸಂತ ಕುಮಾರ್ ಶೆಟ್ಟಿ ಕೊತ್ಯಾರು ಮತ್ತು ಸಂದೀಪ್ ಶೆಟ್ಟಿ ಪೆರ್ಡೂರು ಜೊತೆ ಕಾರ್ಯದರ್ಶಿಗಳಾಗಿ ಹಾಗೂ ರಾಜ್ ಕುಮಾರ್ ಶೆಟ್ಟಿ ದೊಡ್ಮನೆ, ರತ್ನಾಕರ ಶೆಟ್ಟಿ ಪೆರ್ಡೂರು, ಪಿ.ಎಂ.ಪ್ರಸನ್ನ ಹೆಬ್ಬಾರ್ ಪೆರ್ಡೂರು, ಉದಯ ಎಸ್ ಶೇಟ್ಟಿ ಆಲಂಗಾರು, ರವೀಂದ್ರ ಭಂಡಿ ಪೆರ್ಡೂರು ಉಪಾಧ್ಯಕ್ಷರಾಗಿ ಹಾಗೂ ಹಲವಾರು ಮಂದಿ ಸದಸ್ಯರು ಯುವಕ ಸಂಘ (ರಿ) ಪೆರ್ಡೂರಿನ ಶ್ರೀ ಗಣೇಶೋತ್ಸವ ಸುವರ್ಣ ಸಂಭ್ರಮದ ವೈಭವ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.



