ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿಲ್ಲಾ ಮಟ್ಟದ 14 ರ ವಯೋಮಾನದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ ಬಾಲಕಿಯರ ತಂಡ ಪ್ರಥಮಸ್ಥಾನಿಯಾಗಿ ಸತತ ಮೂರನೇ ಬಾರಿಗೆ ಮೈಸೂರು ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಕಳ ತಂಡದಲ್ಲಿ ಪಡುಕುಡೂರು ಶಾಲಾ ಬಾಲಕಿಯರಾದ ದೀಕ್ಷಾ, ಸುಚಿತಾ,ಪ್ರಣೀತಾ,ಅನನ್ಯಾ,ದೀಕ್ಷಿತಾ ಕ್ರೈಸ್ಟ್ ಕಿಂಗ್ ವಿದ್ಯಾ ಸಂಸ್ಥೆಯ ಬಾಲಕಿಯರ ಜೊತೆಗೂಡಿ ಅತ್ಯುತ್ತಮ ಪ್ರದ್ರಶನಗೈದು ಶಾಲೆಗೆ,ಊರಿಗೆ ಹೆಮ್ಮೆ ತಂದಿರುತ್ತಾರೆ.
ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕವೃಂದದವರು, ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರು, ಗೌರವಾಧ್ಯಕ್ಷರು ,ಅಧ್ಯಕ್ಷರು, ಸರ್ವ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಳೆ ವಿದ್ಯಾರ್ಥಿ ಸಂಘ, ಗೌರವಾಧ್ಯಕ್ಷರು, ಅಧ್ಯಕ್ಷರು,ಗೌರವಸಲಹೆಗಾರರು ಮತ್ತು ಸರ್ವ ಸದಸ್ಯರು ಶತಮಾನೋತ್ಸವ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.



