ಮಾಳ : ವಿದ್ಯಾಭಾರತಿ ಉಡುಪಿ ಜಿಲ್ಲೆ ಹಾಗೂ ಶ್ರೀ ಗುರುಕುಲ ವಿದ್ಯಾವರ್ಧಕ ಸಂಘ ಮಾಳ ಇವರ ಆಶ್ರಯದಲ್ಲಿ 19ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ್ ಕಾರ್ಯಕ್ರಮ- 2026 ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು. ಉಡುಪಿ ಜಿಲ್ಲೆಯ ಸುಮಾರು 34 ವಿದ್ಯಾಸಂಸ್ಥೆಗಳಿಂದ ೩೦೦ಕ್ಕೂ ಹೆಚ್ಚಿನ ಶಿಕ್ಷಕರು ಮತ್ತು ಬೋಧಕೇತರ ವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೂಡುಬಿದಿರೆಯ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಡಾ. ಶರತ್ ಗೋರೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿದ್ಯಾ ಭಾರತೀಯ ಉಡುಪಿ ವಿಭಾಗದ ಅಧ್ಯಕ್ಷ ಪಾಂಡುರಂಗ ಪೈ ಸಿದ್ಧಾಪುರ ವಹಿಸಿದ್ದರು.
ನಿವೃತ್ತ ಶಿಕ್ಷಕ ನಾಗಭೂಷಣ ಜೋಶಿ, ವಿದ್ಯಾ ಭಾರತೀಯ ಉಪ ಖಜಾಂಚಿ ಟಿ ನಾಗರತ್ನ, ಪ್ರತ್ಯಕ್ಷ ಸುರೇಶ್, ಶಾಲಾ ಸಂಚಾಲಕ ಸುಧಾಕರ ಡೊಂಗ್ರೆ, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ, ವಿದ್ಯಾಭಾರತಿ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾತನಾಡಿದರು.
ವಿವಿಧ ಅವಧಿಗಳಲ್ಲಿ ಬೋಧಕ ಬೋಧಕೇತರ ವರ್ಗ ಮತ್ತು ಆಡಳಿತ ವರ್ಗದವರಿಗೆ ವಿವಿಧ ಬೌದ್ಧಿಕ ಕಾರ್ಯಕ್ರಮಗಳು ನಡೆದವು. ಕಾರ್ಕಳ ಹಿರ್ಗಾನ ಕ್ರಿಯೇಟಿವ್ ಕಾಲೇಜಿನ ಅಶ್ವಥ್ ಎಸ್. ಎಲ್, ಕೃಷ್ಣಮೂರ್ತಿ ಹೈಕಾಡಿ, ಪ್ರತ್ಯಕ್ಷ ಸುರೇಶ್ ವಿವಿಧ ವಿಭಾಗಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ವಿವಿಧ ಶಾಲೆಗಳ ಆಡಳಿತ ಮಂಡಳಿಯವರು,ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಹಿರಿಯ ಶಿಕ್ಷಕಿ ಶೋಭಾ ನಿರೂಪಿಸಿ, ಪೂರ್ಣಿಮಾ ಶೆಣೈ ಸ್ವಾಗತಿಸಿ, ಸುಧಾಕರ ಡೋಂಗ್ರೆ ವಂದಿಸಿದರು.
ಸಮಾರೋಪ ಸಮಾರಂಭ : ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ, ಟಿ.ನಾಗರತ್ನ, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಪಾಂಡುರಂಗ ಪೈ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ ಚಿಪ್ಲೂಣ್ಕರ್, ಆಡಳಿತ ಮಂಡಳಿ ಸದಸ್ಯ ರಾಮ ಸೇರಿಗಾರ್, ವಿದ್ಯಾ ಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಮಾತನಾಡಿದರು. ಕಾರ್ಯಕ್ರಮಗಳಲ್ಲಿ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗೌರವಿಸಲಾಯಿತು.
ವಿದ್ಯಾ ಭಾರತಿ ಪ್ರಾರ್ಥನಾ ಗೀತೆ ಆಧಾರಿತ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಅಮೃತ ಭಾರತಿ ಹೆಬ್ರಿ
ದ್ವಿತೀಯ ಸ್ಥಾನ ಶ್ರೀಗುರುಕುಲ ಶಾಲೆ ಮಾಳ, ತೃತೀಯ ಸ್ಥಾನ ಪಡೆದ ಸಂಸ್ಥೆಗಳ ರಾಮಪ್ಪ ಶಾಲೆ ಕಾರ್ಕಳ ಸಂಸ್ಥೆಗಳ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಶಿಕ್ಷಕಿ ಜ್ಯೋತಿ ನಿರೂಪಿಸಿದರು ರಾಮ ಸೇರಿಗಾರ್ ಸ್ವಾಗತಿಸಿ, ಮಹೇಶ್ ಹೈಕಾಡಿ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ ಸಿಹಿತಿಂಡಿಯ ಗಿಫ್ಟ್ ಪ್ಯಾಕ್ ವ್ಯವಸ್ಥೆಯನ್ನು ಮಾಡಿದ್ದರು. ಕ್ರಿಯೇಟಿವ್ ಸಂಸ್ಥಾಪಕ ಅಶ್ವಥ್ ಮತ್ತು ನೀಲೇಶ್ ಮಾಳ ಆಧ್ಯಾಪಕರಿಗೆ ನೋಟ್ ಪ್ಯಾಡ್ ಮತ್ತು ಪೆನ್ ಗಳನ್ನು ಪ್ರಾಯೋಜಿಸಿದ್ದರು ಆಡಳಿತ ಮಂಡಳಿಯ ಸದಸ್ಯರು ಶಿಕ್ಷಕ ವೃಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.



