Sunday, October 18, 2026
Homeಹೆಬ್ರಿಮದಗ ಫೌಂಡೇಶನ್ ಟ್ರಸ್ಟ್‌ ನಿಂದ ಗಾಂಧಿಜಯಂತಿ : ಸ್ವಚ್ಛತಾ ಸಾಮಗ್ರಿ ವಿತರಣೆ

ಮದಗ ಫೌಂಡೇಶನ್ ಟ್ರಸ್ಟ್‌ ನಿಂದ ಗಾಂಧಿಜಯಂತಿ : ಸ್ವಚ್ಛತಾ ಸಾಮಗ್ರಿ ವಿತರಣೆ

ಹೆಬ್ರಿ : ಗಾಂಧಿ ಜಯಂತಿಯ ಪ್ರಯುಕ್ತ ಹೆಬ್ರಿಯ ಇಂದಿರಾನಗರ “ಮದಗ ಫೌಂಡೇಶನ್ ಟ್ರಸ್ಟ್‌ ನಡೆ – ಗಾಂಧೀಜಿ ಕಂಡ ಸ್ವಚ್ಛ ಭಾರತದ ಕಡೆ” ಎಂಬ ಘೋಷವಾಕ್ಯದೊಂದಿಗೆ ಮದಗ ಫೌಂಡೇಶನ್ ಟ್ರಸ್ಟ್ ವತಿಯಿಂದ ಸ್ವಚ್ಛತಾ ಸೇವಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಹೆಬ್ರಿಯ ವಿವಿಧ ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಸರ್ಕಾರಿ ಹಾಸ್ಟೆಲ್‌ಗಳು, ವಿವಿಧ ಸರ್ಕಾರಿ ಕಚೇರಿಗಳು, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ದೇವಸ್ಥಾನಗಳಿಗೆ ಕಸ ತುಂಬುವ ಬುಟ್ಟಿ ಮತ್ತು ವಿವಿಧ ಸ್ವಚ್ಛತಾ ಸಾಮಗ್ರಿಗಳನ್ನು ವಿತರಿಸಲಾಯಿತು. ಸ್ವಚ್ಛತೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ “ಮದಗ ಫೌಂಡೇಶನ್ ಟ್ರಸ್ಟ್‌ ಪದಾಧಿಕಾರಿಗಳಾದ ಸುನಿಲ್ ಭಂಡಾರಿ, ಪ್ರಕಾಶ್ ಶೆಟ್ಟಿ ಕಲ್ಲಿಲ್ಲು, ನಾಗರಾಜ್ ನಾಯ್ಕ್, ಸುರೇಶ್ ಭಂಡಾರಿ ಹಾಗೂ ರಾಘವೇಂದ್ರ ನಾಯ್ಕ್ ಮತ್ತು ಸದಸ್ಯರಾದ ವಿಠಲ್ ಪೂಜಾರಿ, ಸಂಪತ್ ಶೆಟ್ಟಿ, ಪ್ರಸಾದ್ ಭಂಡಾರಿ, ಸುಶಾಂತ್ ನಾಯ್ಕ್, ಹರೀಶ್ ಭಂಡಾರಿ ಹರೀಶ್ ರೈ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!