Sunday, October 18, 2026
Homeಹೆಬ್ರಿಹೆಬ್ರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಅಭಿನಂದನಾ ಕಾರ್ಯಕ್ರಮ.

ಹೆಬ್ರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಅಭಿನಂದನಾ ಕಾರ್ಯಕ್ರಮ.

ಹೆಬ್ರಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹೆಬ್ರಿ ತಾಲೂಕು, ಹೆಬ್ರಿ ತಾಲೂಕು ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಮತ್ತು ಅಭಿನಂದನಾ ಕಾರ್ಯಕ್ರಮ ಹೆಬ್ರಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರಗಿತು.

ಕಳೆದ 7 ವರ್ಷಗಳಿಂದ ಕುಚ್ಚೂರು ಗ್ರಾಮ ಪಂಚಾಯಿತಿನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಸುಶೀಲಾ ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಹೆಬ್ರಿ ತಾಲೂಕಿನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿ ಪಡೆದ ಅಮೃತ ಕುಲಾಲ್ ಅವರಿಗೆ ಅಭಿನಂದನೆ ಮತ್ತು ನಾಡ್ಪಾಲು ಗ್ರಾಮ ಪಂಚಾಯತ್ ನಿಂದ ಬ್ರಹ್ಮಾವರ ಕಾಡೂರು ಗ್ರಾಮ ಪಂಚಾಯತ್ ಗೆ ಕಾರ್ಯದರ್ಶಿಯಾಗಿ ವರ್ಗಾವಣೆ ಗೊಂಡಿರುವ ದೇವಕಿಯ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ನೂತನವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಹೆಬ್ರಿ ತಾಲೂಕಿಗೆ ಬಂದಿರುವ ಮಮತಾ ಶೆಟ್ಟಿ ಕುಚ್ಚೂರು ಗ್ರಾಮ ಪಂಚಾಯಿತಿ,ಅನುಪಮಾ ವರಂಗ ಗ್ರಾಮ ಪಂಚಾಯಿತಿ ಇವರಿಗೆ ಸ್ವಾಗತ ಕೋರಲಾಯಿತು.

ಕಾರ್ಯಕ್ರಮದಲ್ಲಿ ಹೆಬ್ರಿ ತಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ದಿನೇಶ್ ಡಿ ಈ ಅವರು ಅಧಿಕಾರಿಗಳ ಸೇವಾ ನಿಷ್ಠೆ ಮತ್ತು ಬದ್ದತೆಯ ಬಗ್ಗೆ ಪ್ರಶಂಶಿಸಿ ಶುಭ ಹಾರೈಸಿದರು.

ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷೆ ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸದಾಶಿವ ಸೇರ್ವೆಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳಾದ ಸುಭಾಷ್ ಖಾರ್ವಿ ,ಶೀತಲ್, ರಿತೇಶ್ ಪುತ್ರನ್, ಸತೀಶ್, ಮಮತಾ ಶೆಟ್ಟಿ, ಅನುಪಮಾ, ಅಶೋಕ್ ಎಚ್ ಈ, ಕಾರ್ಯದರ್ಶಿಗಳು,ಲೆಕ್ಕ ಸಹಾಯಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಮಮತಾ ಶೆಟ್ಟಿ ಸ್ವಾಗತಿಸಿ ಪ್ರಸಾದ್ ಶೆಟ್ಟಿ ನಿರೂಪಿಸಿದರು
ಸುಭಾಷ್ ಖಾರ್ವಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!