ಹೆಬ್ರಿ : ಹೆಬ್ರಿ ಸಮೀಪದ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಮತ್ತು ಕಜ್ಕೆ ಶ್ರೀ ಶಾಖಾ ಮಠದಲ್ಲಿ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ಮತ್ತು ಶಿಷ್ಯರಾದ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಇದೇ ಅಕ್ಟೋಬರ್ 06 ರಿಂದ 08 ತನಕ 3 ದಿನ ಮೋಕ್ಕಾಂ ಇರಲಿದ್ದಾರೆ ಎಂದು ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.



