Sunday, October 18, 2026
Homeಹೆಬ್ರಿಹೆಬ್ರಿ : 72ನೇ ವನ್ಯಜೀವಿ ಸಪ್ತಾಹ.

ಹೆಬ್ರಿ : 72ನೇ ವನ್ಯಜೀವಿ ಸಪ್ತಾಹ.

ಸೋಮೇಶ್ವರ ವನ್ಯಜೀವಿ ವಲಯ ಆಯೋಜಿಸಿದಪಕ್ಷಿ ವೀಕ್ಷಣೆ ಕಾರ್ಯಕ್ರಮ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಸ್ವಯಂಸೇವಕರಿಂದ ಪಕ್ಷಿವೀಕ್ಷಣೆ.

ಹೆಬ್ರಿ : 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸೋಮೇಶ್ವರ ವನ್ಯಜೀವಿ ವಲಯ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆಯೋಜಕರಾದ ಸೋಮೇಶ್ವರ ವನ್ಯಜೀವಿ ವಲಯ ಇದರ ಅರಣ್ಯ ಅಧಿಕಾರಿ ಮಂಜುನಾಥ ಗಾಣಿಗ ಅವರು ಅರಣ್ಯ ಉಳಿಸುವ ಮತ್ತು ಬೆಳೆಸುವಲ್ಲಿ ಪಕ್ಷಿಗಳ ಪಾತ್ರದ ಬಗ್ಗೆ ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಕ್ಷಿ ತಜ್ಞ ಜಾಯ್ ಅವರು ಪಕ್ಷಿಗಳನ್ನ ಗುರುತಿಸುವ ಬಗ್ಗೆ ಹಾಗೂ ಸೋಮೇಶ್ವರ ಪರಿಸರದಲ್ಲಿ ಮಾತ್ರ ಕಾಣಸಿಗುವ ಕೆಲವು ಪಕ್ಷಿಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ವೀಕ್ಷಿಸುವ ವಿಧಾನವನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸುಷ್ಮಾ ರಾವ್ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಹಾಗು ಎನ್ಎಸ್ಎಸ್ ಸ್ವಯಂಸೇವಕರು ಪಕ್ಷಿಗಳನ್ನು ದುರ್ಬಿನುಗಳ ಮೂಲಕ ವೀಕ್ಷಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!