ಹೆಬ್ರಿ : ನಮ್ಮ ಸಂಘ ಉಳಿಯಬೇಕು ಬೆಳೆಯಬೇಕು ಮತ್ತು ಬೆಳಗಬೇಕು. ಸಮಾಜದಲ್ಲಿ ಬ್ರಾಹ್ಮಣರು ಇಂದು ತಮ್ಮ ಮೂಲ ಸಿದ್ಧಾಂತ, ಮೌಲ್ಯಗಳನ್ನು ಮರೆಯುತ್ತಿದ್ದಾರೆ. ನಮ್ಮ ಜ್ಞಾನ, ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಳ್ಳುವುದನ್ನು ಮರೆತಿದ್ದೇವೆ. ಹೆಬ್ರಿ ವಿಪ್ರ ಸಂಘದಿಂದ ಮನೆಮನೆಗೆ ತೆರಳಿ ಏಕಾದಶಿ ಭಜನೆ, ಧಾರ್ಮಿಕ ಶಿಬಿರ, ವಿಷ್ಣು ಸಹಸ್ರನಾಮ ಪಠಣ, ಆರೋಗ್ಯ ಶಿಬಿರಗಳನ್ನು ನಡೆಸಿದ್ದೇವೆ ಎಂದು ಹೆಬ್ರಿ ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮಕೃಷ್ಣ ಆಚಾರ್ ಹೇಳಿದರು.
ಹೆಬ್ರಿ ಶ್ರೀ ಅನಂತ ಪದ್ಮನಾಭ ಕೃಪಾ ಸಭಾಭವನದಲ್ಲಿ ಹೆಬ್ರಿ ವಲಯ ಬ್ರಾಹ್ಮಣ ಸಂಘ ಮತ್ತು ಹೆಬ್ರಿ ತಾಲ್ಲೂಕು ವಿಪ್ರ ಮಹಿಳಾ ವೇದಿಕೆ ವತಿಯಿಂದ ವಿಪ್ರ ಸಮಾಗಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಉಚಿತ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಬ್ರಿ ಅನಂತಪದ್ಮನಾಭ ಸೌಹಾರ್ದ ಸೊಸೈಟಿ ಅಧ್ಯಕ್ಷ ರಾಘವೇಂದ್ರ ಆಚಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಾಧಕರಾದ ಯುವ ವಿಪ್ರ ವಿದ್ವಾಂಸ ರಾಮಕುಮಾರ್ ಜೋಯಿಸ್ ಹೆಬ್ರಿ, ವಾಸುದೇವ ಉಪಾಧ್ಯಾಯ, ಶಿಶಿರ ಜೋಯಿಸ್, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಧನ್ವಿ ಹೆಬ್ಬಾರ್, ಸ್ವಸ್ತಿಕ್ ಬಾಯಾರಿ, ಶ್ರವಣ ಸೋಮಯಾಜಿ, ಪ್ರಿಯಾಂಕ, ವೈಷ್ಣವಿ ಹೇರಳೆ, ಅಚಿಂತ್ಯಾ ನಕ್ಷತ್ರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮೊದಲು ಮತ್ತು ನಂತರ ಭಜನೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ವಾಂಸ ಗಿಲ್ಲಾಳಿ ಪದ್ಮನಾಭ ಆಚಾರ್ಯ, ಸಂಘದ ಸ್ಥಾಪಕಾಧ್ಯಕ್ಷ ರಘುರಾಮ ಸೋಮಯಾಜಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ಉದ್ಯಮಿ ಲಕ್ಷ್ಮಣ ಭಟ್, ಮೋಹನರಾಜ್ ಜೋಯಿಸ್, ನಿವೃತ್ತ ಪ್ರಾಂಶುಪಾಲ ವಾಸುದೇವ ಭಟ್ ಎನ್, ವಿಪ್ರ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಭಾರ್ಗವಿ ಆರ್. ಐತಾಳ್, ಅಧ್ಯಕ್ಷೆ ಸುಮಂಗಲಾ ಭಟ್ ಉಪಸ್ಥಿತರಿದ್ದರು.
ಪ್ರಕಾಶ್ ಭಟ್ ಲೆಕ್ಕ ಪತ್ರ ಮಂಡಿಸಿದರು. ಗಣೇಶ್ ಹೇರಳೆ ಸ್ವಾಗತಿಸಿದರು. ಸದಾಶಿವ ಬಾಯರಿ, ಕಾರ್ಯದರ್ಶಿ ಸುನೀತಾ ಹೆಬ್ಬಾರ್ ನಿರೂಪಿಸಿದರು. ನಿತ್ಯಾನಂದ ಭಟ್ ವಂದಿಸಿದರು.



