Sunday, October 18, 2026
Homeಹೆಬ್ರಿನರೇಂದ್ರ ಮೋದಿಜಿ ಅಧಿಕಾರ ಅವಧಿಯ 25ರ ಸಂಭ್ರಮ.

ನರೇಂದ್ರ ಮೋದಿಜಿ ಅಧಿಕಾರ ಅವಧಿಯ 25ರ ಸಂಭ್ರಮ.

ಹೆಬ್ರಿ ಬಿಜೆಪಿ ಗ್ರಾಮ ಸಮಿತಿಯಿಂದ ಅಂಗನವಾಡಿ ಕಾರ್ಯಕರ್ತೆಯರು – ಸಹಾಯಕಿಯರಿಗೆ ಸನ್ಮಾನ.

ಹೆಬ್ರಿ : ಹೆಬ್ರಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ನರೇಂದ್ರ ಮೋದಿಜಿ ಅವರು ಅಧಿಕಾರಕ್ಕೆ ಬಂದು 25 ವರ್ಷ ಪೂರ್ಣಗೊಂಡ ಪ್ರಯುಕ್ತ ಹೆಬ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಇತ್ತೀಚೆಗೆ ಗುರುತಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಹೆಬ್ರಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್‌, ಹೆಬ್ರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಾರಾನಾಥ್ ಬಂಗೇರ. ಮಾಜಿ ಉಪಾಧ್ಯಕ್ಷರಾದ ವೀಣಾ ಪ್ರಭು. ಗಣೇಶ್ ಕುಮಾರ್, ಸುಪ್ರಿಯಾ, ಗ್ರಾಮ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಕನ್ಯಾನ, ಕಾರ್ಯದರ್ಶಿ ಸುರೇಶ್ ಭಂಡಾರಿ ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!