Sunday, October 18, 2026
Homeಕುಚ್ಚೂರು ಗ್ರಾಮ ಪಂಚಾಯತ್‌ಕುಚ್ಚೂರು ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಗ್ರಾಮ ಸಭೆ. ನಮ್ಮವರಿಗೆ ಭೂಮಿ...

ಕುಚ್ಚೂರು ಗ್ರಾಮ ಪಂಚಾಯಿತಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಗ್ರಾಮ ಸಭೆ. ನಮ್ಮವರಿಗೆ ಭೂಮಿ ದೊರಕಿಸಿಕೊಡಿ : ಮನವಿ.

ಕುಚ್ಚೂರು : ಡಿಸಿ ಮನ್ನಾ ಭೂಮಿಯ ಅಳತೆ ಆಗಿದ್ದರು, ಫಲಾನುಭವಿಗಳಿಗೆ ಹಂಚಿಕೆ ಆಗಿರುವುದಿಲ್ಲ, ಒತ್ತುವರಿಯಾಗಿದ್ದಲ್ಲಿ ಶೀಘ್ರ ಸರಿಪಡಿಸಿ, ನಮ್ಮವರಿಗೆ ಭೂಮಿ ದೊರಕಿಸಿಕೊಡಿ ಎಂದು ದಲಿತ ಸಮುದಾಯದ ಮುಖಂಡ ರಾಘವೇಂದ್ರ ಹೇಳಿದರು.

ಕುಚ್ಚೂರು ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಚಕ್ರಬೆಟ್ಟು ರಸ್ತೆ, ದೂಪದ ಕಟ್ಟೆ ಶಾಲೆಯ ಬಳಿ ಅಪಾಯಕಾರಿ ಮರಗಳಿರುವುದರಿಂದ, ಅರಣ್ಯ ಇಲಾಖೆ ತೆರವು ಮಾಡಬೇಕೆಂದು ಸುಂದರ ನಾಯ್ಕ್ ಮತ್ತು ಶಾಮ ನಾಯ್ಕ ಮನವಿ ಮಾಡಿದರು.

ಸರ್ವೇ ನಂಬರ್ 49ರಲ್ಲಿ ಪ್ಲಾಟಿಂಗ್ ಆಗದೆ ಇರುವುದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಮಸ್ಯೆಯಿದೆ. ಕಂದಾಯ ಇಲಾಖೆಯವರು ಕ್ರಮ ಜರುಗಿಸಲು ರಾಧಾಕೃಷ್ಣ ನಾಯ್ಕ್ ಕೇಳಿಕೊಂಡರು.
ನೋಡಲ್ ಅಧಿಕಾರಿ ರವಿಚಂದ್ರ ಕಾರಂತ್ ಮಾತನಾಡಿ, ವಿಶೇಷ ಗ್ರಾಮ ಸಭೆಯಲ್ಲಿ ಸಮುದಾಯದವರು ತಮ್ಮ ಅಹಾವಲುಗಳನ್ನು ಸಲ್ಲಿಸಿ, ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಉತ್ತಮ ವೇದಿಕೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಪಿಡಿಒ ಮಮತಾ, ಮೆಸ್ಕಾಂ ಜೆಇ ಲಕ್ಷ್ಮೀಶ್, ಮುಖಂಡರಾದ ರಾಮ ಬೇಳಂಜೆ, ಇಲಾಖೆಯ ಅಧಿಕಾರಿಗಳಿದ್ದರು.
ಸುಶೀಲಾ ಸ್ವಾಗತಿಸಿದರು. ಮಮತಾ ನಿರೂಪಿಸಿದರು. ಯಶೋದ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!