ಯೇಸುವಿನೊಂದಿಗೆ ನಡೆಯೋಣ ವಿಶೇಷ ಕಾರ್ಯಕ್ರಮ : ಸೇರಿದ ನೂರಾರು ಮಕ್ಕಳು, ಹಿರಿಯರು.
ಕ್ರೈಸ್ತರು ಪ್ರಾರ್ಥನೆಯನ್ನು ಮರೆಯಬಾರದು : ಸ್ಯಾಮುವೆಲ್ ಮನೋಜ್ ಕುಮಾರ್
ಹೆಬ್ರಿ : ಕ್ರೈಸ್ತರು ಯಾರು ಜೀವನದಲ್ಲಿ ಪ್ರಾರ್ಥನೆಯನ್ನು ಎಂದೂ ಮರೆಯಬಾರದು. ಪ್ರಾರ್ಥನೆ ಎಂದು ನಾವು ತಂದೆ – ಏಸುವಿನೊಂದಿಗೆ ಮಾತನಾಡುವುದು, ಏಸುವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು, ಪೋಷಕರು ಮಕ್ಕಳಿಗೆ ನಾವು ಏಸುವನ್ನು ಅರ್ಥ ಮಾಡಿಸಿ, ಮಕ್ಕಳಿಗೆ ದೇವರ ವಾಕ್ಯವನ್ನು ಅರ್ಥ ಮಾಡಿಸಿದಾಗ ಮಾತ್ರ ನಮ್ಮೇಲ್ಲರ ಜೀವನ ಪಾವನವಾಗುತ್ತದೆ, ಏಸುವಿನೊಂದಿಗೆ ನಡೆದ ಹಾಗೆ ಆಗುತ್ತದೆ ಎಂದು ಸಿಎಸ್ಐ ಕೆ.ಎಸ್.ಡಿಯ ಭಾನುವಾರ ಶಾಲಾ ಸಂಚಾಲಕರಾದ ರೆವೆ. ಸ್ಯಾಮುವೆಲ್ ಮನೋಜ್ ಕುಮಾರ್ ಸಂದೇಶ ನೀಡಿದರು.

ಅವರು ಭಾನುವಾರ ಹೆಬ್ರಿಯ ಸಿಎಸ್ಐ ಇಮ್ಮಾನುವೇಲ್ ದೇವಾಲಯದ ಆತಿಥ್ಯದಲ್ಲಿ
ಸಿಎಸ್ಐ ಕೆ.ಎಸ್.ಡಿ ಉಡುಪಿ ಪ್ರಾದೇಶಿಕ ಪರಿಷತ್ತಿನ ವತಿಯಿಂದ ನಡೆದ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಸಂದೇಶ ನೀಡಿದರು.

ಜಾಗತಿಕ ಭಾನುವಾರ ಶಾಲಾ ದಿನಾಚರಣೆ ವಿಶೇಷ ಕಾರ್ಯಕ್ರಮಕ್ಕೆ 246 ವರ್ಷಗಳ ಐತಿಹಾಸಿಕ ಹಿನ್ನಲೆಯಿದೆ. ಭಾರತದಲ್ಲಿ 150 ವರ್ಷಗಳ ಇತಿಹಾಸವಿದೆ. ನಾವು ಮಕ್ಕಳನ್ನು ಜಾಗತಿಕ ಭಾನುವಾರ ಶಾಲಾ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿಸಿದಾಗ ದೇವರ ವಾಕ್ಯದಂತೆ ಮಕ್ಕಳನ್ನು ಬೆಳೆಸಿದಂತೆ ಆಗುತ್ತದೆ. ಆಗ ಮಕ್ಕಳ ಜೀವನ ರೂಪುಗೊಳ್ಳುತ್ತದೆ. ದೇವರ ವಾಕ್ಯದಲ್ಲಿ ನಾವೆಲ್ಲರೂ ಬೆಳೆಯುವುದು ಅತೀ ಮುಖ್ಯವಾಗುತ್ತದೆ. ಇದರಿಂದ ನಾವು ಸಭ್ಯರಾಗಲು ಸಾಧ್ಯವಿದೆ. ಹೆಬ್ರಿಯ ಸಿಎಸ್ಐ ಇಮ್ಮಾನುವೇಲ್ ದೇವಾಲಯದ ಇತಿಹಾಸದಲ್ಲಿ ಒಳ್ಳೇಯ ದಿನ ಒಳ್ಳೇಯ ಕಾರ್ಯಕ್ರಮ ನಡೆದಿದೆ. ಆ ಮೂಲಕ ಏಸುವಿನೊಂದಿಗೆ ನಡೆದ ಹಾಗೇ ಆಗಿದೆ. ಇಲ್ಲಿನ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ರೆವೆ. ಸ್ಯಾಮುವೆಲ್ ಮನೋಜ್ ಕುಮಾರ್ ಸಂದೇಶದಲ್ಲಿ ತಿಳಿಸಿದರು.

ನಾವು ಎಲ್ಲಿದ್ದೇವೆ, ಏಕೆ ಇದ್ದೇವೆ ಎಂದು ಅರಿತು ಜೀವನದಲ್ಲಿ ಮುನ್ನಡೆದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಭಾನುವಾರ ಶಾಲೆಯ ಕಾರ್ಯಕ್ರಮದ ಮೂಲಕ ಮಕ್ಕಳು ಜೀವನವನ್ನು ಬದಲಿಸಿ ನಡೆದಾಗ ನಮ್ಮೇಲ್ಲರ ಪ್ರಯತ್ನ ಫಲ ನೀಡುತ್ತದೆ, ಬದುಕು ಸಮೃದ್ಧವಾಗುತ್ತದೆ. ನಾವು ಪ್ರೀತಿ ವಿಸ್ವಾಸ ಮತ್ತು ನಂಬಿಕೆಯ ಮೂಲಕ ನೀತಿವಂತರಾಗಬೇಕು. ಇದು ದೇವರ ವಾಕ್ಯ. ನೀತಿವಂತರಾದಾಗ ಮಾತ್ರ ನಾವು ಏಸುವಿನೊಂದಿಗೆ ನಡೆದಂತಾಗುತ್ತದೆ. ಯಾವೂದೇ ಅಡ್ಡಿ ಆತಂಕವಿಲ್ಲದೆ ದೇವರೊಂದಿಗೆ ನಡೆಯುವುದಕ್ಕೆ ಮಕ್ಕಳನ್ನು ಹೆಜ್ಜೆ ಹಾಕಿಸಬೇಕು, ನಮ್ಮ ಜೀವ ಮತ್ತು ಜೀವನವನ್ನು ದೇವರು ಕೊಟ್ಟದ್ದು, ನಮ್ಮ ಜೀವನದ ಸುಧಾರಣೆಗಾಗಿ ನಾವೆಲ್ಲರೂ ಏಸುವಿನೊಂದಿಗೆ ನಡೆಯೋಣ, ಭಾನುವಾರ ಶಾಲೆಯ ಕಾರ್ಯಕ್ರಮದಲ್ಲಿ ಬಹುಮಾನ ಗೆಲ್ಲುವುದು ಮುಖ್ಯವಲ್ಲ, ಆತ್ಮವನ್ನು ಗೆಲ್ಲಬೇಕು, ಆ ಮೂಲಕ ಏಸುವಿನೊಂದಿಗೆ ನಡೆಯಬೇಕು ಎಂದು ರೆವೆ. ಸ್ಯಾಮುವೆಲ್ ಮನೋಜ್ ಕುಮಾರ್ ಜೀವನ ಸಂದೇಶ ನೀಡಿದರು.

ಉಡುಪಿ ಜಿಲ್ಲೆಯ ವಿವಿದೆಡೆಯಿಂದ ಮಕ್ಕಳು ಹಿರಿಯರು ಸೇರಿ ನೂರಾರು ಮಂದಿ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಿಂದ ಮೆರವಣಿಗೆಯಲ್ಲಿ ಮಕ್ಕಳು, ಕ್ರೈಸ್ತ ಧರ್ಮಗುರುಗಳ ಸಹಿತ ಪೋಷಕರು ಸೇರಿ ಮೆರವಣಿಗೆಯಲ್ಲಿ ಹೆಬ್ರಿಯ ಸಿಎಸ್ಐ ಇಮ್ಮಾನುವೇಲ್ ದೇವಾಲಯಕ್ಕೆ ಆಗಮಿಸಿದರು.

ಬಳಿಕ ದೇವಾರಾಧನೆಯೊಂದಿಗೆ ಯೇಸುವಿನೊಂದಿಗೆ ನಡೆಯೋಣ ಮುಖ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ಪ್ರಾರ್ಥನೆಗಳು ನೆರವೇರಿಸಲಾಯಿತು.
ಸತ್ಯವೇದ ಪ್ರಶ್ನಾವಳಿ, ನೃತ್ಯ, ತುಳು ಬೈಬಲ್ ಪಠಣ, ಬೈಬಲ್ ಕಥನ ಕಿರು ಪ್ರಹಸನ, ಅಭಿನಯಗೀತೆ, ಬೋಧನಾ ಸಾಧನಾ ತಯಾರಿಕ ಸ್ಫರ್ಧೇ, ಬರವಣಿಗೆ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಮಾರೋಪ ಸಮಾರಂಭ ನಡೆಯಿತು.

ಸಿಎಸ್ಐ ಕೆ.ಎಸ್.ಡಿ ಧರ್ಮಾಧ್ಯಕ್ಷ ರೈಟ್. ರೆವ. ಹೇಮಚಂದ್ರ ಕುಮಾರ್ ಪ್ರಧಾನ ಅತಿಥಿಯಾಗಿ ವಿಶೇಷ ಸಂದೇಶ ನೀಡಿದರು. ಸ್ಟೀಫನ್ ಕರ್ಕಡ, ವಿವಿಧ ದೇವಾಲಯಗಳ ಅಯ್ಯನವರು ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು.

ಉಡುಪಿ ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷ ರೆವ. ಕಿಶೋರ್ ಕುಮಾರ್, ಉಪಾಧ್ಯಕ್ಷ ರೆವ. ಎಡ್ವಿನ್ ಜೋಸೆಫ್, ಕಾರ್ಯದರ್ಶಿ ಸಿರಿಲ್ ಸೋನ್ಸ್, ಖಜಾಂಚಿ ಡೇನಿಯೇಲ್ ಅಮ್ಮನ್ನ, ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಕಾರ್ಯಕ್ರಮ ಸಮಿತಿಯ ಹೆಬ್ರಿಯ ಸಿಎಸ್ಐ ಇಮ್ಮಾನುವೆಲ್ ದೇವಾಲಯದ ಸಭಾ ಪಾಲಕ ರೆವ. ಕಿಶೋರ್ ಕುಮಾರ್, ಸಹ ಸಭಾಪಾಲಕ ರೆವ. ನವೀನ್ ಆರ್ ಕೋಟ್ಯಾನ್, ಸಂಚಾಲಕ ಸೆಬ್ಬಾಸ್ಟಿನ್ ಎಸ್ ಕೋಟ್ಯಾನ್, ಖಜಾಂಚಿ ಫ್ಲಾವ್ಯ ಅಂಬ್ಲರ್ ಸೇರಿದಂತೆ ಹಲವು ಪ್ರಮುಖರು, ಗಣ್ಯರು, ಶಿಕ್ಷಕರು, ವಿವಿಧ ವಿಭಾಗಳ ಪ್ರಮುಖರು, ಸದಸ್ಯರು ಭಾಗಿಯಾದರು.

ಹೆಬ್ರಿಯ ಹಲವು ಮಂದಿ ಸ್ವಯಂಸೇವಕರಾಗಿ ಯಶಸ್ಸಿಗೆ ಶ್ರಮಿಸಿದರು. ವಲಯ ಕಾರ್ಯಕಾರಿ ಮಂಡಳಿ ಉಡುಪಿ ಪ್ರಾದೇಶಿಕ ಪರಿಷತ್ತು, ಸ್ಥಳೀಯ ಜಾಗತಿಕ ಭಾನುವಾರ ಶಾಲಾ ದಿನಾಚರಣೆ ಸಮಿತಿ, ಸಿಎಸ್ಐ ಇಮ್ಮಾನುವೇಲ್ ದೇವಾಲಯ ಹೆಬ್ರಿಯ ಸರ್ವ ಸದಸ್ಯರು ಭಾಗಿಯಾದರು.




