ಇಂದು ಮುದ್ರಾಡಿಯಲ್ಲಿ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ 2026.
ಮುದ್ರಾಡಿ : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಮತ್ತು ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಇಂದು ನವಂಬರ್ ೧೨ ರಂದು
14 ವಯೋಮಾನದ ಹೆಬ್ರಿ ಕಾರ್ಕಳ ತಾಲ್ಲೂಕು ಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ 2026 ನಡೆಯಲಿದೆ.
ಬಾಲಕ ಬಾಲಕಿಯರ ಒಟ್ಟು 40 ತಂಡಗಳು ಭಾಗವಹಿಸುತ್ತವೆ. ಮುಖ್ಯಶಿಕ್ಷಕರು ಮತ್ತು ಅಧ್ಯಾಪಕ ವೃಂದ, ಅಧ್ಯಕ್ಷರು ಮತ್ತು ಸರ್ವಸದಸ್ಯರು ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿಗಳು, ಪೋಷಕರು,ವಿದ್ಯಾರ್ಥಿಗಳು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.



