Thursday, November 12, 2026
Homeಹೆಬ್ರಿಕಜ್ಕೆ ಶ್ರೀಧರ ಕಾಮತ್ ವಿಧಿವಶ

ಕಜ್ಕೆ ಶ್ರೀಧರ ಕಾಮತ್ ವಿಧಿವಶ

ಶ್ರೀ ಶಿವಸುಜ್ಞಾನ ಮಹಾಸ್ವಾಮೀಜಿ ಸಂತಾಪ.
ಕಜ್ಕೆ ( ನಾಲ್ಕೂರು ) : ಬ್ರಹ್ಮಾವರ ತಾಲ್ಲೂಕು ನಾಲ್ಕೂರು ಗ್ರಾಮದ ಕಜ್ಕೆ ನಿವಾಸಿ ಕಜ್ಕೆ ಮನೆತನದ ಹಿರಿಯರಾದ ಶ್ರೀಧರ ಕಾಮತ್‌ (75 ) ಅವರು ಗುರುವಾರ ಹೃದಯಘಾತದಿಂದ ನಿಧನರಾದರು. ಜನಾನುರಾಗಿಯಾಗಿರುವ ಶ್ರೀಧರ ಕಾಮತ್‌ ಸಮಾಜಸೇವೆಯಲ್ಲಿ ಸಕ್ರೀಯರಾಗಿದ್ದರು. ಕಜ್ಕೆ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತಿದ್ದರು. ಊರಿನಲ್ಲಿ ನಡೆಯುವ ಒಳ್ಳೇಯ ಕೆಲಸದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಅತ್ಯಂತ ಧಾರ್ಮಿಕ ಶೃದ್ಧೆಯನ್ನು ಹೊಂದಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದು ಹಿರಿಯ ಪುತ್ರ ರಾಮಕೃಷ್ಣ ಕಾಮತ್‌ ಹುಬ್ಬಳ್ಳಿಯಲ್ಲಿ ಉದ್ಯಮಿಯಾಗಿದ್ದಾರೆ. ಕಿರಿಯ ಪುತ್ರ ವೆಂಕಟೇಶ ಕಾಮತ್‌ ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಭಾಗ್ಯಲಕ್ಷ್ಮೀ ಕಾಮತ್‌ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಕಳೆದ ವಾರವಷ್ಟೇ ಕಾಶಿಯಾತ್ರೆಯನ್ನು ಮುಗಿಸಿಕೊಂಡು ಬಂದಿದ್ದರು.
ಕಜ್ಕೆ ಶೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸ್ಥಳದಾನ : ತನ್ನ ಮನೆಯ ಸಮೀಪದಲ್ಲೇ ದೇವಿಯ ಸಾನಿಧ್ಯವಿದ್ದು ಅದು ಜೀರ್ಣೋದ್ಧಾರಗೊಂಡಾಗ ಮಾತ್ರ ಊರಿಗೆ ಶ್ರೇಯೋಭಿವೃದ್ಧಿ ಸಾಧ್ಯ ಎಂಬ ಕನಸನ್ನು ಕಂಡು ತನ್ನ ಜಾಗವನ್ನು ದಾನವಾಗಿ ನೀಡಿದ್ದರು. ಎಲ್ಲರ ಪ್ರಯತ್ನದ ಮೂಲಕ ಕಜ್ಕೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನವು ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ನೇತ್ರತ್ವದಲ್ಲಿ ದೇವಸ್ಥಾನ ನಿರ್ಮಾಣಗೊಂಡು ಅನ್ನಪೂರ್ಣೇಶ್ವರಿಯ ಪ್ರತಿಷ್ಠೆಗೊಂಡಾಗ ತನ್ನ ಜೀವನ ಸಾರ್ಥಕವಾಗಿದೆ ಎಂದು ಶ್ರೀಧರ ಕಾಮತ್‌ ಹೇಳಿಕೊಳ್ಳುತ್ತ ಕಜ್ಕೆ ಶ್ರೀಕ್ಷೇತ್ರದ ಸೇವೆ ಮತ್ತು ಅಭಿವೃದ್ಧಿಯಲ್ಲಿ ಸಕ್ರೀಯರಾಗಿದ್ದರು. ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಅವರ ಆಪ್ತರಾಗಿ ಸೇವೆಯಲ್ಲಿಯೇ ಖುಷಿಯನ್ನು ಕಾಣುತ್ತಿದ್ದರು. ಕಜ್ಕೆ ಶ್ರೀ ಕ್ಷೇತ್ರ ನಿರ್ಮಾಣದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿದ್ದರು.
ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಆಪ್ತರು : ಸಮಾಜಸೇವೆಯಲ್ಲಿ ಸಕ್ರೀಯರಾಗಿದ್ದ ಕಜ್ಕೆ ಶ್ರೀಧರ ಕಾಮತ್ ಮಾಜಿ ಸಚಿವರಾದ ಮುಖಂಡ ಕೆ. ಜಯಪ್ರಕಾಶ ಹೆಗ್ಡೆಯವರ ಆಪ್ತರಾಗಿದ್ದರು.
ಶ್ರೀ ಶಿವಸುಜ್ಞಾನ ಸ್ವಾಮೀಜಿ ಸಂತಾಪ : ನಮ್ಮ ಕಜ್ಕೆ ಕ್ಷೇತ್ರಕ್ಕೆ ಸ್ಥಳದಾನ ಮಾಡಿದ ಬಳಿಕ ಶ್ರೀಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರೀಧರ ಕಾಮತ್‌ ದುಡಿಯುತ್ತಿದ್ದರು. ಶ್ರೀಕ್ಷೇತ್ರಕ್ಕೆ ಶ್ರೀಧರ ಕಾಮತ್‌ ಸಲ್ಲಿಸುತ್ತಿದ್ದ ಸೇವೆ ಸ್ಮರಣಿಯ, ಶ್ರೀಧರ ಕಾಮತ್‌ ಅಪಾತ ದೈವಭಕ್ತಿಯನ್ನು ಹೊಂದಿದ್ದು ಎಲ್ಲರಿಗೂ ಬೇಕಾದವರಾಗಿದ್ದಾರೆ, ಅವರ ಆತ್ಮಕ್ಕೆ ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿಯು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆಯನ್ನು ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.
ಹಲವಾರು ಮಂದಿ ಅಂತಿಮ ದರ್ಶನ : ಶ್ರೀಧರ ಕಾಮತ್‌ ನಿಧನದ ಸುದ್ದಿ ತಿಳಿದು ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಕಜ್ಕೆ ಶ್ರೀಕ್ಷೇತ್ರದ ಆಡಳಿತ ಮಂಡಳಿ, ಕಜ್ಕೆ ಕರುಣಾಕರ ಶೆಟ್ಟಿ, ಕಾಶಿನಾಥ ಶೆಣೈ, ಜೋಮ್ಲು ಅಭಿವೃದ್ಧಿ ಸಮಿತಿಯ ಚಾರ ಮಿಥುನ್‌ ಶೆಟ್ಟಿ, ಹೆಬ್ರಿ ಸತೀಶ ಪೈ, ಸಂತೆಕಟ್ಟೆ ಗಿರೀಶ ಕಾಮತ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
‌ ನಾಳೆ ಅಂತಿಮ ಸಂಸ್ಕಾರ : ಶ್ರೀಧರ ಕಾಮತ್‌ ಅವರ ಅಂತ್ಯ ಸಂಸ್ಕಾರ ಕಾರ್ಯವು ಕಜ್ಕೆ ಮನೆಯ ಪರಿಸರದಲ್ಲಿ ನಾಳೆ ನವಂಬರ್‌ 13 ರಂದು ಬೆಳಿಗ್ಗೆ 7 ಗಂಟೆಯ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!