ನವಂಬರ್ 13 ರಿಂದ 15 ರ ತನಕ – ಜನಪದ ಮತ್ತು ಕೋಲೋತ್ಸವ.
ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸಂಕೃತಿ ಸಚಿವಾಲಯ ನವದೆಹಲಿ ಸಹಕಾರದಲ್ಲಿ ನವಂಬರ್ 13ರಿಂದ 15ರ ತನಕ ಜನಪದ ಮತ್ತು ಕೋಲೋತ್ಸವ ನಡೆಯಲಿದೆ. 13 ರಂದು ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಮೂಡಬಿದರೆ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸುವರು. ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶ್ರೀ ಗೋಳಿಗರಡಿ ಮೇಳದ ಯಜಮಾನ ವಿಠ್ಠಲ ಪೂಜಾರಿ ಯಕ್ಷಗಾನ ಕೃತಿ ಹಸ್ತಾಂತರ ಮಾಡುವರು.

ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉಪಸ್ಥಿತರಿರುವರು. ಯಕ್ಷಗಾನ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಅವರಿಗೆ ಅಭಿನಂದನೆ ನಡೆಯಲಿದೆ ಎಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜಾಲಾ ತಿಳಿಸಿದ್ದಾರೆ.




