Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ಮುನಿಯಾಲು : ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ : ಆರೋಗ್ಯ ತಪಾಸಣಾ ಶಿಬಿರ.

ಮುನಿಯಾಲು : ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ : ಆರೋಗ್ಯ ತಪಾಸಣಾ ಶಿಬಿರ.

ಮುನಿಯಾಲು ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ, ಹೃದಯ,ಮಧುಮೇಹ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು. ಶಿಬಿರವನ್ನು ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ.ರಾಮಕೃಷ್ಣ ಆಚಾರ್ ಉದ್ಘಾಟಿಸಿದರು.

ಶಿಬಿರದಲ್ಲಿ 102 ಯೂನಿಟ್ ರಕ್ತ ಸಂಗ್ರಹಿಸಲಾಯಿತು. 198 ಮಂದಿ ಅರೋಗ್ಯ ತಪಾಸಣೆ ನಡೆಸಿದರು.ಹೆಬ್ರಿ ಪೊಲೀಸ್‌ ಸಬ್‌ ಇನ್ಸ್‌ ಫೆಕ್ಟರ್‌ ರವಿ ಬಿ. ಕೆ, ಕಾರ್ಕಳ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಡಾ ಸಮರ್ಥ್ ವಿ.ಶೆಟ್ಟಿ, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್, ಮುನಿಯಾಲಿನ ಉದ್ಯಮಿ ಗಿರೀಶ್ ಪೈ, ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸತೀಶ್ ಸಲ್ಯಾನ್, ಮುನಿಯಾಲು ಸುರೇಂದ್ರ ಬೋಂಟ್ರ, ಉದ್ಯಮಿ ಮಂಜುನಾಥ್‌ ಕಾಡುಹೊಳೆ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಖಜಾನೆ ಸಂದೇಶ ಶೆಟ್ಟಿ, ಕಾರ್ಕಳ ಎಸ್‌ ಕೆಪಿಎ ಅಧ್ಯಕ್ಷ ಪ್ರಮೋದ ಚಂದ್ರ ಪೈ, ಮುನಿಯಾಲು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಕಾರ್ಯದರ್ಶಿ ನಾಗೇಶ್ ಆಚಾರ್ಯ, ಮುನಿಯಾಲು ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ. ಸುದರ್ಶನ್ ಹೆಬ್ಬಾರ್, ಅಧ್ಯಕ್ಷ ರಾಜೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಮುಟ್ಲುಪಾಡಿ ಸುಹಾಸ್ ಶೆಟ್ಟಿ ಸ್ವಾಗತಿಸಿ ರಾಮಚಂದ್ರ ನಾಯಕ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments