ಮಾನಸಿಕ ದೈಹಿಕ, ದೈಹಿಕ ದೃಢತೆಗಾಗಿ ಯೋಗ ಸಹಕಾರಿ. : ಶ್ರೀನಿವಾಸ ಶೆಟ್ಟಿ
ಕುಚ್ಚೂರು : ನಿರಂತರ ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಸಾಧ್ಯ. ಯಾರು ಯೋಗ ಮಾಡುತ್ತಾರೆ, ಅವರು ರೋಗದಿಂದ ದೂರ ಉಳಿಯುತ್ತಾರೆ. ಹೃದಯದ ರಕ್ಷಣೆಗೆ ಸದಾ ಯೋಗ ಬೇಕು ಎಂದು ಯೋಗ ಪಟು ಹಾಗೂ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಶೆಟ್ಟಿ ಹೇಳಿದರು.

ಅವರು ಶಾಂತಿನಿಕೇತನದ ಯುವ ವೃಂದದ ವತಿಯಿಂದ ನಡೆದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ಮಹೇಶ್, ಶಾಂತಿನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಜೇಶ್, ಪ್ರಧಾನ ಕಾರ್ಯದರ್ಶಿ ನರೇಂದ್ರ ಎಸ್ ಮರಸಣಿಗೆ, ಕೋಶಾಧಿಕಾರಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ದೀಕ್ಷಿತ್ ನಾಯಕ್, ಜಯಕರ, ಕೆ. ಗಣೇಶ್, ವಿದ್ಯಾರ್ಥಿ ಘಟಕದ ಸದಸ್ಯರಿದ್ದರು.


