ಕುಚ್ಚೂರು : ಗಣೇಶೋತ್ಸವದ ಮೂಲಕ ಯುವ ಜನರು ಒಗ್ಗಟ್ಟಾಗಲು ಸಾಧ್ಯ. ಅಂದು ಬಾಲಗಂಗಾಧರ್ ತಿಲಕರು ಬ್ರಿಟಿಷರ ವಿರುದ್ಧ ಹೋರಾಡಲು ಯೋಜನೆ ರೂಪಿಸಿದ್ದರಿಂದ ಇಂದು ಗಣೇಶೋತ್ಸವ ಎಲ್ಲೆಡೆ ನಡೆಯುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಶ್ರೀ ಸಿದ್ಧಿ ವಿನಾಯಕ ಶಾಸ್ತ್ರಿ ನಗರ ಸಳ್ಳೆಕಟ್ಟೆ ಕುಚ್ಚೂರು ವತಿಯಿಂದ ನಡೆದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಅಧ್ಯಕ್ಷ ರಮೇಶ್ ಕೆ. ಕೆಳಬಾದ್ಲು ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ನಿವೃತ್ತ ಉಪನ್ಯಾಸಕ ಬಿ ವೆಂಕಟ ಕೃಷ್ಣ ಭಟ್ ನೀಡಿದರು.
ಪ್ರತಿಷ್ಠಾಪನೆ, ಗಣ ಹೋಮ, ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಉದ್ಯಮಿಗಳಾದ ಕಿರಣ್ ತೋಳಾರ್, ಲಕ್ಷ್ಮಿ ನಾರಾಯಣ ನಾಯಕ್ ಕನ್ಯಾನ, ಸಮಿತಿ ಸದಸ್ಯ ಅಶೋಕ್ ಪೂಜಾರಿ, ಸಮಿತಿ ಸದಸ್ಯರು, ಸಾರ್ವಜನಿಕರು ಇದ್ದರು.



