ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ಶಿಬಿರ : ಉದಯ ಕುಮಾರ್ ಶೆಟ್ಟಿ
ಕುಚ್ಚೂರು : ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯ ಬಗ್ಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಹಳ್ಳಿಯ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ನಮ್ಮ ಟ್ರಸ್ಟ್ ಮೂಲಕ ನಡೆಯುವ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.
ಅವರು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ವಿನಾಯಕ ಗೆಳೆಯರ ಬಳಗ ಕುಚ್ಚೂರು, ಮಲ್ಲಿಕಾರ್ಜುನ ಭಜನಾ ಮಂಡಳಿ ಬೇಳಂಜೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಶಾಸ್ತ್ರಿನಗರ, ಬ್ರಹ್ಮಬೈದರ್ಕಳ ರಿಕ್ಷಾ ನಿಲ್ದಾಣ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಮಣಿತ್ತಾಯ ಧೂಮಾವತಿ ಗರಡಿ ಟ್ರಸ್ಟ್ ಕುಚ್ಚೂರು, ಕುಚ್ಚೂರು ಕಂಬಳ ಕ್ರೀಡಾ ಸಮಿತಿ, ಶೌರ್ಯ ವಿಪತ್ತು ನಿರ್ವಹಣ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ನೇತ್ರ, ಕಣ್ಣಿನ ಪೊರೆ, ದಂತ ಹಾಗೂ ಮಕ್ಕಳ ಆರೋಗ್ಯ ತಪಾಸಣ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರದಲ್ಲಿ ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಶನ್, ಕೆ.ಎಂ.ಸಿ, ಮಣಿಪಾಲದ ಸಮುದಾಯ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ವಿಭಾಗ, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಸೇರಿದಂತೆ ಹಲವು ವೈದ್ಯಕೀಯ ಸಂಸ್ಥೆಗಳ ತಜ್ಞರಿಂದ ಸಾಮಾನ್ಯ ಆರೋಗ್ಯ, ಇಸಿಜಿ, ಕಣ್ಣು, ದಂತ, ಚರ್ಮ, ಮಧುಮೇಹ ರಕ್ತ ಪರೀಕ್ಷೆ ಹಾಗೂ ಕ್ಯಾನ್ಸರ್ ತಪಾಸಣೆ ನಡೆಸಿ ಅಗತ್ಯವಿರುವವರಿಗೆ, ಚಿಕಿತ್ಸಾ ಸಲಹೆ ಹಾಗೂ ಉಚಿತ ಕನ್ನಡಕ ನೀಡಲಾಯಿತು. 270 ಕ್ಕೂ ಮಿಕ್ಕಿ ಜನ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು.
ವೈದ್ಯ ಡಾ.ಅನುಪ್ ಕೆ. ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಮೂಡಬಿದರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ. ರವಿಪ್ರಸಾದ್ ಹೆಗ್ಡೆ ಆರೋಗ್ಯ ಮಾಹಿತಿ ನೀಡಿದರು. ಉದ್ಯಮಿಗಳಾದ ಪ್ರವೀಣ್ ಬಲ್ಲಾಳ್, ಕಿರಣ್ ತೋಳಾರ್, ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಕುಲಾಲ್, ಮುನಿಯಾಲು ಲಯನ್ಸ್ ಕ್ಲಬ್ ಗೋಪಿನಾಥ ಭಟ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ರೋಶನ್ ಶೆಟ್ಟಿ, ಸನತ್ ಕುಮಾರ್ ಶೆಟ್ಟಿ, ಸತೀಶ ಪೂಜಾರಿ ಕುಚ್ಚೂರು ಶಿಬಿರ ಸಂಯೋಜಿಸಿದರು.
ವಿಜಯ ಕುಲಾಲ್ ಬೇಳಂಜೆ, ಸತೀಶ ಪೂಜಾರಿ ಕುಚ್ಚೂರು, ಮಹೇಶ ಶೆಟ್ಟಿ ಬಾದ್ಲು, ಮಹೇಶ ಶೆಟ್ಟಿ ಕುಚ್ಚೂರು, ಸುಧಾಕರ ಶೆಟ್ಟಿ ದೇವಳಬೈಲು, ಸಂತೋಷ ಪೂಜಾರಿ, ಉದಯ ಪೂಜಾರಿ, ರಾಘವೇಂದ್ರ ಬೇಳಂಜೆ ಸಹಕರಿಸಿದರು. ಕೆರೆಬೆಟ್ಟು ಪ್ರವೀಣ್ ಸೂಡ ನಿರೂಪಿಸಿ ವಂದಿಸಿದರು.



