Sunday, August 9, 2026
Homeಶಿವಪುರ ಗ್ರಾಮ ಪಂಚಾಯತ್‌ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ - ಲೆಕ್ಕಪತ್ರ ಮಂಡನೆ

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ – ಲೆಕ್ಕಪತ್ರ ಮಂಡನೆ

ಶಿವಪುರ : ನಮ್ಮೂರಿನ ದೇವಸ್ಥಾನದ ಜೀರ್ಣೋದ್ಧಾರ ಪುಣ್ಯದ ಕಾರ್ಯದಲ್ಲಿ ಕೈಜೋಡಿಸಿ ಅತ್ಯಂತ ಯಶಸ್ವಿಯಾಗಿ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಿ ವೈಭವದಿಂದ ಬ್ರಹ್ಮಕಲಶಾಭಿಷೇಕವನ್ನು ನೆರವೇರಿಸಲು ಶ್ರಮಿಸಿದ ಸರ್ವ ಭಕ್ತ ಸಮೂಹಕ್ಕೆ ಭಕ್ತಿಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಅಧ್ಯಕ್ಷತೆಯ ಹೊಣೆಯನ್ನು ನೀಡಿ ದೇವರ ಸೇವೆಯನ್ನು ಮಾಡಲು ಅವಕಾಶ ನೀಡಿದ ಸರ್ವರಿಗೂ ಋಣಿಯಾಗಿದ್ದೇನೆ. ಶಿವಪುರ ಶ್ರೀ ಶಂಕರದೇವ ದೇವಸ್ಥಾನ ಇನ್ನಷ್ಟು ಬೆಳಗಲಿ ಸರ್ವರಿಗೂ ಒಳಿತಾಗಲಿ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವೇದಮೂರ್ತಿ ಶಿವಪುರ ವಾಸುದೇವ ಭಟ್‌ ಹೇಳಿದರು.

ಅವರು ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ನಡೆದ ಶಿವಪುರದ ಇತಿಹಾಸ ಪ್ರಸಿದ್ಧ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮಂಗಳೂರಿನ ಜಂಟಿ ನಿರ್ದೇಶಕ ಮೂರ್ಸಾಲು ಗೋಕುಲದಾಸ ನಾಯಕ್‌ ಜೀರ್ಣೋದ್ಧಾರ ಕಾರ್ಯದ ಲೆಕ್ಕಪತ್ರವನ್ನು ಮಂಡಿಸಿದರು. ಲೆಕ್ಕಪತ್ರಕ್ಕೆ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ನಾಯಕ್‌, ಕಾಮಗಾರಿ ಸಮಿತಿ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಅರ್ಚಕ ಮಹಾಬಲೇಶ್ವರ ಅಡಿಗ, ಜೀರ್ಣೋದ್ಧಾರ ಸಮಿತಿಯ ಸದಸ್ಯ ಪ್ರಸನ್ನ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂತೋಷ ಕುಮಾರ್‌ ಶೆಟ್ಟಿ ನಾಯರಕೋಡು, ಸದಾನಂದ ಪೂಜಾರಿ, ವಿವಿಧ ಪ್ರಮುಖರಾದ ಬಿ. ಚಂದ್ರಶೇಖರ ಶೆಟ್ಟಿ ಬಿಲ್ಲುಬೈಲು, ಮೂರ್ಸಾಲು ಮೋಹನದಾಸ ನಾಯಕ್‌, ಜಯಶೀಲ ಹೆಗ್ಡೆ, ರಾಮ ಬೆಳಿರಾಯ ನಾಯರಕೋಡು, ಶಂಕರ ಬಡ್ಕಿಲ್ಲಾಯ, ಸುನಂದ ಕುಲಾಲ್‌, ವಿಶಾಲಾಕ್ಷಿ ಶೆಟ್ಟಿ, ಜಗನ್ನಾಥ ಕುಲಾಲ್‌, ರಮೇಶ ಕುಮಾರ್‌, ರಾಘವೇಂದ್ರ ಪ್ರಭು, ಪೂರ್ಣಿಮಾ, ಪುಪ್ಪಾ, ವಿನಯ ಕುಮಾರ್‌, ದಿವಾನಂದ ಪೂಜಾರಿ, ಕೆ.ಆನಂದ ಕೊಠಾರಿ, ಮಾಧವ ಸೇರಿಗಾರ್ ಸೇರಿದಂತೆ ಜೀಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು. ವಿಶ್ವನಾಥ ನಾಯಕ್‌ ಸ್ವಾಗತಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments