ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಬೇಸಾಯಗಾರರು ಕಂಗಲಾಗಿದ್ದರು. ವಾಡಿಕೆಯಂತೆ ಜೂನ್ ಮೊದಲು ವಾರದಲ್ಲಿ ಮುಂಗಾರು ಮಳೆ ಬರದೆ ರೈತರು ಬೇಸಾಯ ಮಾಡಬೇಕೋ ಬೇಡವೋ ಎಂಬ ಚಿಂತೆಯಲ್ಲೇ ಇದ್ದರು. ಜೂನ್ ಅಂತ್ಯದ ಕಾಲದಲ್ಲಿ ಸ್ವಲ್ಪಸ್ವಲ್ಪ ಮಳೆಯಾಗಿ ರೈತರ ಮೊಗದಲ್ಲಿ ನಗು ಮೂಡಲು ಆರಂಭಿಸಿತು. ಗದ್ದೆ ಉಳುಮೆ ಮಾಡಿ ಹದ ಮಾಡುವುದು, ಸೇರಿ ನಾಟಿ ಕಾರ್ಯಕ್ಕೆ ಪೂರ್ವ ತಯಾರಿ ಆರಂಭಗೊಂಡು ಇದೀಗ ಕೃಷಿ ಕಾರ್ಯ ನಾಟಿ ಪೂರ್ಣಗೊಂಡಿದೆ.
ಗದ್ದೆ ಬೇಸಾಯ ಮಾಡುವವರೇ ಅತ್ಯಂತ ವಿರಳವಾಗಿದೆ. ಈ ನಡುವೆ ಈ ಸಲ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಮಂದಿ ಭತ್ತದ ಬೇಸಾಯಗಾರರು ಇನ್ನು ಏನು ಮಾಡುವುದು, ಭಿತ್ತಿದ ಬೀಜ ಮೊಳಕೆ ಬಂದಿಲ್ಲ. ಬಂದರೂ ನೀರಿಲ್ಲದೆ ನಾಟಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲೇ ಇದ್ದರು. ಜೂನ್ ಅಂತ್ಯದ ಬಳಿಕ ಜುಲೈ ಪೂರ್ಣ ತಿಂಗಳು ಮಳೆಯಾಗಿದೆ. ಬೇಸಾಯಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಮೊಗದಲ್ಲಿ ನಗು ಮೂಡಿದೆ. ಮಳೆ ಕೈಕೊಟ್ಟಿದ್ದರಿಂದ ಎಲ್ಲರ ಬಾಯಲ್ಲೂ … ಈ ಸಲ ಅಕ್ಕಿಗೆ ೧೦೦ ರೂಪಾಯಿ ಆಗುತ್ತೋ ಎಂಬ ಆತಂಕ ಎಲ್ಲರನ್ನು ಕಾಡುತಿತ್ತು. ಇದೀಗ ಆರಂಭದಲಲ್ಲಿ ಕೈಕೊಟ್ಟ ಮಳೆ ಮತ್ತೇ ಬಂದಿದೆ. ಬಹುತೇಕ ಕಡೆಯಲ್ಲಿ ನೀರಾಗಿದೆ. ನೇಜೆ ಬೆಳೆದು ಫಸಲು ಬರುವ ತನಕ ಯಥೇಚ್ಛವಾಗಿ ಮಳೆಯಾಗಲಿ ಎಂಬುದೇ ರೈತರ ನಿರೀಕ್ಷೆ. ಬೆಳಿಗೆದ್ದು ನೋಡುವಾಗ ಗದ್ದೆ ತುಂಬಾ ನೀರಿರಲಿ… ನಾಟಿ ಮಾಡಿದ ನೇಜಿ ಬೆಳೆದು ಅತ್ಯುತ್ತಮ ಫಸಲು ಬಂದು ಸಮಸ್ಯೆಯಿಲ್ಲದೆ ಭತ್ತ ಮನೆಗೆ ತಲುಪಲಿ ಎಂಬುದು ನಮ್ಮೇಲ್ಲ ರೈತರ ಆಶಯ.


