Wednesday, September 23, 2026
Homeಹೆಬ್ರಿ ನ್ಯೂಸ್ ವಿಶೇಷಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ 2026: 3 ದಿನಗಳ ಶ್ರೀ ಕೃಷ್ಣಾಷ್ಟಮೀ ಉತ್ಸವ ಉದ್ಘಾಟನೆ.

ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ 2026: 3 ದಿನಗಳ ಶ್ರೀ ಕೃಷ್ಣಾಷ್ಟಮೀ ಉತ್ಸವ ಉದ್ಘಾಟನೆ.

ಹಿರಿಯ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಗೆ ಜನ್ಮಾಷ್ಡಮೀ ಪುರಸ್ಕಾರ ಪ್ರದಾನ.

ನವದೆಹಲಿ : ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 39 ನೇ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಶ್ರೀ ಕೃಷ್ಣಾಷ್ಟಮೀ ಉತ್ಸವವನ್ನು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಜಲಸಾರಿಗೆ ರಾಜ್ಯ ಸಚಿವ ಹಾಗೂ ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹರ್ಷ ಮಲ್ಹೋತ್ರಾ ಅವರು ದೀಪ ಬೆಳಗಿಸಿ ಉದ್ಘಾಟಸಿ ಶುಭ ಸಂದೇಶ ನೀಡಿದರು.

ಸಂಸದೆ ಮೀನಾಕ್ಷಿ ಲೇಖಿ, ಶಾಸಕರುಗಳಾದ ಅನಿಲ್ ಶರ್ಮಾ ಅಜಯ್ ಮಹಾವೀರ್ , ಜೋಧ್ ಪುರದ ನಾಮಧಾರಿ ಸಂಪ್ರದಾಯದ ಸಂತ ಶ್ರೀನಿವಾಸ್ ಅವರು ಉಪಸ್ಥಿತರಿದ್ದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಉಡುಪಿ ಮೂಲದ ಹಿರಿಯ ಐಎಎಸ್ ಅಧಿಕಾರಿ ಚಂಢೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಅವರಿಗೆ ಸ್ವಾಮೀಜಿಯವರು ಪೇಜಾವರ ಮಠ ಸಂಸ್ಥಾನದ ವತಿಯಿಂದ ಜನ್ಮಾಷ್ಟಮೀ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ರಾಜೇಶ್ ಪ್ರಸಾದ್ ಅವರು ತಮಗೆ ನೀಡಿದ ಸಂಮಾನಕ್ಕೆ ಆಭಾರ ವ್ಯಕ್ತಪಡಿಸಿ ಪೇಜಾವರ ಮಠದ ಶ್ರೀ ಸ್ವಾಮೀಜಿಯವರ ಮೂಲಕ ದಶಕಗಳಿಂದ ಇಡೀ ದೇಶಕ್ಕೆ ವಿಶೇಷವಾಗಿ ಸನಾತನ ಧರ್ಮ ಸಂಸ್ಕೃತಿಗಳ ಸಂರಕ್ಷಣೆಯ ಕಾರ್ಯಕ್ಕೆ ಒದಗುತ್ತಿರುವ ಬಹುಮುಖಿ ಸೇವೆ ಹಾಗೂ ಮಾರ್ಗದರ್ಶನ ಬೆಲೆ ಕಟ್ಟಲಾಗದ್ದು ಎಂದು ಬಣ್ಣಿಸಿದರು.

ಮುಂಬಯಿಯ ಪ್ರಸಿದ್ಧ ವಕೀಲ ವಿಜಯ ಕುಲಕರ್ಣಿಯವರು ಶುಭಾಶಂಸನೆಗೈದರು. ಡಾ ವಿಠೋಬಾಚಾರ್ಯ ರಾಕೇಶ್ ಗೌರ್ ಅಶ್ವಿನ್ ಕಕ್ರಣ್ಣಾಯ ಉಪಸ್ಥಿತರಿದ್ದರು.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಸುಧಾಂಶು ಮಿಶ್ರಾ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆಗೈದರು.

ಉದ್ಘಾಟನೆಯ ವೇಳೆ ಗುರುಕುಲದ ಪುಟಾಣಿ ಮಕ್ಕಳು ಬಾಲ ಕೃಷ್ಣವೇಷ ಧರಿಸಿ ಬೆಣ್ಣೆ ತಿನ್ನುವ ಪ್ರಹಸನವನ್ನು ಮನೋಜ್ಞವಾಗಿ ಪ್ರದರ್ಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!