ಹೆಬ್ರಿ : ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಉಚಿತ ಚಂಡೆ ತರಗತಿ ಉದ್ಘಾಟನೆ ಯನ್ನು ಮಹಿಷಮರ್ಧಿನಿ ಸಿಂಗಾರಿ ಮೇಳಮ್ ಹೆಬ್ರಿ ತರಬೇತುದಾರರು ಅಜಯ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷರಾಗಿರುವ ಸೀತಾನದಿ ವಿಜೇಂದ್ರ ಶೆಟ್ಟಿ ವಹಿಸಿದ್ದರು.
ಉಪಪ್ರಾಂಶುಪಾಲ ದಿವಾಕರ ಎಸ್ ಮರಕಾಲ, ಎಸ್ ಡಿ.ಎಮ್ ಸಿ ಸದಸ್ಯರಾದ ರತ್ನಾಕರ್ ಶೆಟ್ಟಿ, ಶಂಕರ್ ದೇವಾಡಿಗ, ಜಯದೀಪ್ ಆಚಾರ್ಯ, ಸೌಮ್ಯ, ತಿಪ್ಪೆಸ್ವಾಮಿ ಉಪಸ್ಥಿತರಿದ್ದರು
ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.


