ಹೆಬ್ರಿ : ಹೆಬ್ರಿಯ ಬ್ರಹ್ಮಾವರ ರಸ್ತೆಯಲ್ಲಿ ಆಗಸ್ಟ್ 07 ರಂದು ಸಂಜೆಯ ಹೊತ್ತಿನಲ್ಲಿ ಹೆಬ್ರಿಯ ಹುತ್ತೂರ್ಕೆ ಎಂಬಲ್ಲಿ ಕಳ್ತ್ತೂರು ಸಂತೆಕಟ್ಟೆಯ ನಿವಾಸಿ ಸದಾನಂದ ನಾಯಕ್ ಎಂಬವರು ತನ್ನ ಕಾರು ಚಲಾಯಿಸಿಕೊಂಡು ಹೆಬ್ರಿ ಕಡೆ ಹೋಗುತ್ತಿದ್ದಾಗ ಆಕಸ್ಮಾತಾಗಿ ಬೃಹತ್ತಾಕಾರದ ಮರವು ಅವರ ಕಾರಿನ ಮೇಲೆ ಬಿದ್ದು ಅವರ ಜೀವವನ್ನು ಬಲಿ ತೆಗೆದುಕೊಂಡಿದೆ.
ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷದಿಂದ ನಡೆದಂತಹ ಈ ದುರ್ಘಟನೆಯು ಒಬ್ಬ ಅಮಾಯಕನ ಜೀವ ಬಲಿ ತೆಗೆದುಕೊಂಡಿದೆ.
ರಸ್ತೆ ಬದಿಯ ಅಸುರಕ್ಷಿತ ಮರಗಳನ್ನು ತೆರವುಗೊಳಿಸುವುದಾಗಲಿ,
, ರಸ್ತೆಗೆ ವಾಲಿ ಕೊಂಡಿರುವ ಹಾಗೂ ಒಣಗಿದ ಮರಗಳನ್ನು ಕೂಡಾ ತೆಗೆಯುವಲ್ಲಿ ಅರಣ್ಯ ಇಲಾಖೆ ಸದಾ ನಿರ್ಲಕ್ಷವನ್ನು ತೋರಿಸುತ್ತಿದೆ.
ಕಾಲ ಕಾಲಕ್ಕೆ ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಕೆಯಿಂದ ಇರಬೇಕಾಗಿದ್ದ ಅರಣ್ಯ ಇಲಾಖೆ ಈ ದುರ್ಘಟನೆಗೆ ಮತ್ತು ತನಗೆ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದೆ.
ದುಃಖತಪ್ತ ಸದಾನಂದ ನಾಯಕ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಕೂಡಾ ಇಲಾಖೆಯವರು ಇಂದಿಗೂ ಬಂದಿಲ್ಲ.ಅವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಘೋಷಿಸಲಿಲ್ಲ. ಅರಣ್ಯ ಇಲಾಖೆಯವರ ಪ್ರಕಾರ ಸಾರ್ವಜನಿಕರ ಜೀವಕ್ಕೆ ಯಾವುದೇ ಬೆಲೆ ಇಲ್ಲ. ತನ್ನ ಬೇಜವಾಬ್ದಾರಿಯುತ ನಡವಳಿಕೆಯನ್ನು ತಿದ್ದಿಕೊಳ್ಳದ ಇಲಾಖೆಯ ವಿರುದ್ಧವಾಗಿ
ಹೆಬ್ರಿಯಲ್ಲಿ ಇದೇ ಆಗಸ್ಟ್ 20ರಂದು ಪ್ರಗತಿಪರ ನಾಗರಿಕರ ಸೇವಾ ಸಮಿತಿಯ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಹೆಬ್ರಿ ಬಸ್ ನಿಲ್ದಾಣದಿಂದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ತನಕ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ.
ಎಲ್ಲರೂ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಒಬ್ಬ ಅಮಾಯಕನಿಗೆ ಆದ guyಅನ್ಯಾಯದ ವಿರುದ್ಧ ತಮ್ಮ ನೋವನ್ನು ತೋರ್ಪಡಿಸಬೇಕು. ಸದಾನಂದ ನಾಯಕರ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ನೀಡುವ ಕಾರ್ಯದಲ್ಲಿ ತಾವೆಲ್ಲರೂ ಭಾಗಿಗಳಾಗಬೇಕೆಂದು ಕೇಳಿಕೊಳ್ಳುತ್ತೇವೆ ಪ್ರತಿಭನೆಯ ಸಂಘಟಕರಾದ ಕೆ. ರಘುರಾಮ ಶೆಟ್ಟಿ ಮತ್ತು ಕೆರೆಬೆಟ್ಟು ಸಂಜೀವ ಶೆಟ್ಟಿಯವರು ವಿನಂತಿಸಿದ್ದಾರೆ.


