Thursday, September 24, 2026
Homeಹೆಬ್ರಿಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ — ಅರಣ್ಯ ಹಕ್ಕುಪತ್ರ ಫಲಾನುಭವಿಗಳ ಹಕ್ಕೋತ್ತಾಯಗಳಿಗೆ ಸ್ಪಂದಿಸಿ -...

ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ — ಅರಣ್ಯ ಹಕ್ಕುಪತ್ರ ಫಲಾನುಭವಿಗಳ ಹಕ್ಕೋತ್ತಾಯಗಳಿಗೆ ಸ್ಪಂದಿಸಿ – ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ

ಅರಣ್ಯ ಹಕ್ಕುಪತ್ರ ಫಲಾನುಭವಿಗಳಿಗೆ ಬೆಳೆ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು. ಸಹಕಾರಿ ಸಂಘಗಳ ಮೂಲಕ ಬಡ್ಡಿ ಸಹಾಯಧನ, ಬೆಳೆ ಸಾಲ ಹಾಗೂ ಕೃಷಿ ಸಾಲ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಬೇಕು. ಅರಣ್ಯ ಹಕ್ಕುಪತ್ರ ಪಡೆದಿರುವ ರೈತರಿಗೆ ಕೇವಲ ಹಕ್ಕುಪತ್ರ ನೀಡುವುದಷ್ಟೇ ಅಲ್ಲ, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು .ಅರಣ್ಯ ಹಕ್ಕುಪತ್ರ ಫಲಾನುಭವಿಗಳ ಹಕ್ಕುಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಲಿ ಎಂದು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಲೆಕುಡಿಯ ಸಮುದಾಯದ ಹಕ್ಕೋತ್ತಾಯಗಳು:

* ಅರಣ್ಯ ಹಕ್ಕುಪತ್ರ ಫಲಾನುಭವಿಗಳಿಗೆ ಬೆಳೆ ಸಮೀಕ್ಷೆಗೆ ಅವಕಾಶ ಕಲ್ಪಿಸುವುದು. ಸಹಕಾರಿ ಸಂಘಗಳಲ್ಲಿ ಬಡ್ಡಿ ಸಹಾಯಧನ, ಬೆಳೆ ಸಾಲ ಮತ್ತು ಕೃಷಿ ಸಾಲ ಸೌಲಭ್ಯ ಒದಗಿಸುವುದು*ಆದಿವಾಸಿಗಳಿಗೆ ಅತೀ ಶೀಘ್ರದಲ್ಲಿ ರಾಜ್ಯದ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿ ಮಾಡುವುದು

* 7 ತಿಂಗಳಿನಿಂದ ಪೌಷ್ಟಿಕ ಆಹಾರ ಸರಬರಾಜು ಮಾಡುತ್ತಿಲ್ಲ ಕೂಡಲೇ ಒದಗಿಸಬೇಕು

* ಮುಖ್ಯಮಂತ್ರಿ ಆದಿವಾಸಿ ಗೃಹ ಭಾಗ್ಯ ಯೋಜನೆಯಡಿ ವಸತಿ ಮಂಜೂರಾತಿ ಮಾನದಂಡ ಸಡಿಲಿಕೆ ಮಾಡುವುದು ( ಭೂ ದಾಖಲೆ, ಪಡಿತರ ಚೀಟಿ ಇಲ್ಲದೆ ಇರುವುದರಿಂದ GPS ಬಿಟ್ಟು ಭೌತಿಕ ಸ್ಥಳ ಪರಿಶೀಲನೆ ಆಧಾರದ ಮೇಲೆ ಮನೆ ಮಂಜೂರಾತಿ ನೀಡುವುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!