Thursday, September 24, 2026
Homeಹೆಬ್ರಿಹೆಬ್ರಿ : ರಾಜ್ಯಮಟ್ಟದಲ್ಲಿ ಮಿಂಚಿದ ಅಮೃತ ಭಾರತಿ ಪ್ರತಿಭೆಗಳಿಗೆ ಸನ್ಮಾನ.

ಹೆಬ್ರಿ : ರಾಜ್ಯಮಟ್ಟದಲ್ಲಿ ಮಿಂಚಿದ ಅಮೃತ ಭಾರತಿ ಪ್ರತಿಭೆಗಳಿಗೆ ಸನ್ಮಾನ.

ಹೆಬ್ರಿ : ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ವತಿಯಿಂದ ಬಳ್ಳಾರಿಯ ಬಾಲ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಗಣಿತ ವಿಜ್ಞಾನ ಮತ್ತು ಸಂಸ್ಕೃತಿ ಜ್ಞಾನ ಮೇಳದಲ್ಲಿ ರಾಜ್ಯದ 14 ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಬಾಲ ವರ್ಗ ಕಥಾ ಕಥನ ಸ್ಪರ್ಧೆಯಲ್ಲಿ ಕುಮಾರಿ ಅಚಿಂತ್ಯ ಆರ್ ಭಟ್, ಗಣಿತ ಪ್ರಯೋಗದಲ್ಲಿ ರೋಹನ್ ಎಂ, ಗಣಿತ ಮಾದರಿಯಲ್ಲಿ ವಿವಿಧ್ ಹೆಗ್ಡೆ, ವಿಜ್ಞಾನ ಮಾದರಿಯಲ್ಲಿ ಪ್ರಥಮ್ ಎ ಕುಲಾಲ್, ಕಿಶೋರ ವರ್ಗದಲ್ಲಿ ಗಣಿತ ಮಾದರಿಯಲ್ಲಿ ಕುಮಾರಿ ವರ್ಷಿತಾ ಎಸ್, ಗಣಿತ ಗಣಕ ಪ್ರಸ್ತುತಿಯಲ್ಲಿ ಶ್ರೀದತ್ತ, ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿನಿ ಮನಸ್ವಿ ಉಡುಪ ಗಣಿತ ನವಚಾರಿತ ಮಾದರಿ ಪ್ರದರ್ಶನ, ಪಾಂಡುರಂಗ ರಮಣ ನಾಯಕ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾನ್ವಿ ಆರ್ ಶೆಟ್ಟಿ ಆಶು ಭಾಷಣದಲ್ಲಿ, ಸಾತ್ವಿಕ್ ಸೆನ್ಸರ್ ಮಾಡೆಲ್ (ಸಂವೇದಕ ಘಟಕ ಮಾದರಿ) ಇವರೆಲ್ಲರೂ ಪ್ರಥಮ ಸ್ಥಾನ ಗಳಿಸಿ ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾ ವಿಭಾಗದಲ್ಲಿ ಹೈದರಾಬಾದ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರಾವಣಿ ಮತ್ತು ಸಂಕಲ್ಪ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.
ವಿಜೇತ ವಿದ್ಯಾರ್ಥಿಗಳನ್ನು ಅಮೃತ ಭಾರತಿ ಟ್ರಸ್ಟ ಕಾರ್ಯದರ್ಶಿ ಗುರುದಾಸ್ ಶೆಣೈ ಅಭಿನಂದಿಸಿ “ನಿಮ್ಮಿಂದ ಇನ್ನಷ್ಟು ಸಾಧನೆಗಳನ್ನು ನಿರೀಕ್ಷಿಸುತ್ತೇವೆ, ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ, ತಂದೆ ತಾಯಿ ಗುರುಗಳ ಸಹಕಾರ, ಪರಿಶ್ರಮ ಮರೆಯದಿರಿ” ಎಂದು ಕರೆ ನೀಡಿದರು. ಅಮೃತ ಭಾರತಿ ವಿದ್ಯಾಕೇಂದ್ರದ ಪ್ರಾಂಶುಪಾಲ ಅರುಣ್ ಹೆಚ್ ವೈ, ರಾಜ್ಯ ಪಠ್ಯಕ್ರಮದ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಅಪರ್ಣ ಆಚಾರ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಕುಂತಲಾ ಉಪಸ್ಥಿತರಿದ್ದರು. ಕನ್ನಡ ಶಿಕ್ಷಕಿ ವಿಮಲಾ ಸ್ವಾಗತಿಸಿ ನಿರೂಪಿಸಿದರು. ವಿಜೇತರ ಪಟ್ಟಿಯನ್ನು ಶಿಕ್ಷಕಿ ಚೈತ್ರ ವಾಚಿಸಿದರು, ಗಣಿತ ಶಿಕ್ಷಕಿ ಶ್ರುತಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!