Thursday, September 24, 2026
Homeಹೆಬ್ರಿಹೆಬ್ರಿಗೆ ಮುಖ್ಯಮಂತ್ರಿ ಭೇಟಿ : ಪಶ್ಚಿಮ ವಲಯದ ಐಜಿಪಿ ಸ್ಥಳ ಪರಿಶೀಲನೆ.

ಹೆಬ್ರಿಗೆ ಮುಖ್ಯಮಂತ್ರಿ ಭೇಟಿ : ಪಶ್ಚಿಮ ವಲಯದ ಐಜಿಪಿ ಸ್ಥಳ ಪರಿಶೀಲನೆ.

ಹೆಬ್ರಿ : ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆಪ್ಟೆಂಬರ್ 18ರಂದು ಹೆಬ್ರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬುಧವಾರ ಪಶ್ಚಿಮ ವಲಯದ ಐ.ಜಿ.ಪಿ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹೆಲಿಪ್ಯಾಡ್, ಸಭಾ ಕಾರ್ಯಕ್ರಮ ನಡೆಯುವ ಸ್ಥಳ, ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿ ನಿಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ತಿಳಿಸಿದರು.

ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸರು ವರಿಷ್ಠಾಧಿಕಾರಿ ಸುಧಾಕರ ನಾಯ್ಕ್, ಕಾರ್ಕಳ ಎಎಸ್‌ಪಿ ಇಶಿತಾ ಗುಪ್ತ, ಸಿಪಿಐ ರಾಘವೇಂದ್ರ, ಪಿಎಸ್ಐ ಲೋಹಿತ್ ಕುಮಾರ್, ಸಿಬ್ಬಂದಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!