ಉಡುಪಿಯಲ್ಲಿ ಓಣಂ ಆಚರಣೆ – 32ನೇ ವಾರ್ಷಿಕೋತ್ಸವ.
ಉಡುಪಿ : ಕೇರಳಿಗರು ಬುದ್ದಿವಂತರು , ಸಂಸ್ಕಾರವಂತರು , ವಿದ್ಯಾವಂತರು, ಅವರು ಎಲ್ಲಿ ಇದ್ದರೂ ಅವರ ಸಂಸ್ಕಾರ, ಸಂಸ್ಕೃತಿ, ಭಾಷೆ, ಮೇಲಿನ ಅಭಿಮಾನ ಅನನ್ಯ ವಾದದ್ದು ಆಡು ಮುಟ್ಟದ ಸೊಪ್ಪಿಲ್ಲ ಕೇರಳಿಗರು ಮೆಟ್ಟದ ಮಣ್ಣಿಲ್ಲ, ಕೇರಳಿಗರು ವಿಶ್ವ ಯಾವುದೇ ಮೂಲೆಯಲ್ಲಿಯೂ ಯಾವ ಕೆಲಸಕ್ಕೂ ಸೈ ಏನಿಸುತ್ತಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಉಡುಪಿ ಚಿಟ್ಪಾಡಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ (KCSC) ವತಿಯಿಂದ ನಡೆದ ಓಣಂ ಆಚರಣೆ ಹಾಗೂ 32ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೇರಳ ಹಾಗೂ ತುಳುನಾಡಿಗೆ ಅಭಿನಾವ ಸಂಬಂಧವಿದೆ, ವ್ಯವಹಾರಿಕವಾಗಿ ಕೂಡ ಕೇರಳದ ಕರಾವಳಿಯಿಂದ ಮಂಗಳೂರು ಉಡುಪಿ ಉತ್ತರ ಕನ್ನಡ ಜಿಲ್ಲೆಯುದ್ಧಕ್ಕೂ ಇರುವ ಕರಾವಳಿ ಸೌಹಾರ್ದ ಸಂಬಂಧವನ್ನು ಹೊಂದಿದ್ದು, ಮೂಲತ ಕೇರಳಿಗರಾಗಿದ್ದರೂ ನಮ್ಮ ತುಳುನಾಡಿನ ಸಂಸ್ಕೃತಿ ಯನ್ನು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಪ್ರಶಂಸನೀಯ ಎಂದರು.
ನಟ, ಲೇಖಕ ಹಾಗೂ ಗಾಯಕ ರಾಜೇಶ್ ಹೆಬ್ಬಾರ್ ಬಳಿಕ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿಯ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್
ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಅಧ್ಯಕ್ಷ ರಾಜನ್ ಫಿಲಿಪ್ಸ್ ಅಧ್ಯಕ್ಷತೆ ವಹಿಸಿದರು.
ಬೆಂಗಳೂರಿನ ನಾರ್ಕಾ ಡೆವಲಪ್‌ಮೆಂಟ್ ಆಫೀಸರ್ ಜಯಪ್ರಕಾಶ್ ಎಂ.ಕೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ವಿನೋದ್ ವಿ. ಥಾಮಸ್ (ಶಿಕ್ಷಣ), ಡಾ. ರಾಜೇಶ್ ನಾಯರ್ (ಆರೋಗ್ಯ), ಎಂ.ಎಲ್. ಜೋಸೆಫ್ (ಕೃಷಿ), ಲಿಯಾಖತ್ ಅಲಿ (ಕಲೆ ಮತ್ತು ಸಂಸ್ಕೃತಿ) ಹಾಗೂ ಕುಮಾರಿ ಸಾನ್ವಿ ರಾಜೇಶ್ (ನೃತ್ಯ)ಅವರಿಗೆ KCSC ಪಂಚರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಸದಸ್ಯರ ಕುಟುಂಬಗಳ 11 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ತಲಾ ₹5,000 ನಗದು ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿಉಡುಪಿ ಮಿತ್ರಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಲಾಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು ನಡೆಯಿತು.
ಮಕ್ಕಳು ಸೇರಿದಂತೆ ಸುಮಾರು 80 ಮಂದಿ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಕುಟುಂಬ ಸದಸ್ಯರು ನಡೆಸಿದಂತಹ ವಿವಿಧ ನೃತ್ಯ, ಸಂಗೀತ ಹಾಗೂ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.
ಕೇರಳದ ವಿಶಿಷ್ಟ ಅತ್ತಪ್ಪೂಕಳಂ, ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು, ಓಣಂ ಸದ್ಯ ಹಾಗೂ KCSC ಓಣಂ ಗೀತೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಯುವ ಘಟಕ ಮತ್ತು ಸೂಪರ್ ಸೆವೆಂಟಿ ಘಟಕವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಕೇರಳ ಕಣ್ಣೂರಿನ ಕಲಾಭವನ್ ರಾಜೇಶ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು
ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಮಾಜಿ ಅಧ್ಯಕ್ಷ ಸುಗುಣ ಕುಮಾರ್, ಕೋಶಾಧಿಕಾರಿ ಶಾಜಿ ವ ಕರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ ಕಾರ್ಯದರ್ಶಿ ಬಿನೇಶ್ ವಿ.ಸಿ. ಸಂಸ್ಥೆಯ ಚಟುವಟಿಕೆಗಳು ಹಾಗೂ ಸಾಧನೆಗಳನ್ನು ಒಳಗೊಂಡ ಕಾರ್ಯ ವರದಿಯನ್ನು ಮಂಡಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಬಿನಿಲ್ ವಿ. ಸ್ವಾಗತಿಸಿದರು ಓಣಂ ಸಮಿತಿ ಅಧ್ಯಕ್ಷ ಶಿನೋಡ್ ಟಿ.ಆರ್. ವಂದನಾರ್ಪಣೆ ಸಲ್ಲಿಸಿದರು.




