Wednesday, November 11, 2026
Homeಶಿವಪುರ ಗ್ರಾಮ ಪಂಚಾಯತ್‌ಖಜಾನೆ ಗೋಶಾಲೆಯಲ್ಲಿ ಗೋಪೂಜೆ.

ಖಜಾನೆ ಗೋಶಾಲೆಯಲ್ಲಿ ಗೋಪೂಜೆ.

ಗೋಪೂಜೆ ನೆರವೇರಿಸಿದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ.
ನಿತ್ಯ 40 ಲೀಟರ್‌ ಗೂ ಹೆಚ್ಚು ಹಾಲು ಉಚಿತ ವಿತರಣೆ.

ಶಿವಪುರ : ಶಿವಪುರ ಗ್ರಾಮದ ಖಜಾನೆಯಲ್ಲಿರುವ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಅವರ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಅರ್ಚಕ ನಾಯರಕೋಡು ರಘುಪತಿ ಭಟ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಉದಯ ಕುಮಾರ್‌ ಶೆಟ್ಟಿ ದಂಪತಿಗಳು ಪೂಜೆ ನೆರವೇರಿಸಿದರು.

ಖಜಾನೆ ಕರುಣಾಕರ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಭಾಗಿಯಾದರು. ಗೋ ಪ್ರೇಮಿ ಮುನಿಯಾಲು ಉದಯ್ ಕುಮಾರ್‌ ಶೆಟ್ಟಿ ಅವರು ತನ್ನ ಗೋಶಾಲೆಯಲ್ಲಿ 70 ಲೀಟರಿಗೂ ಹೆಚ್ಚು ಹಾಲನ್ನು ದಿನಕ್ಕೆ ಪಡೆಯುತ್ತಿದ್ದಾರೆ.

ಅದರಲ್ಲಿ ಹಾಲನ್ನು 40 ಲೀಟರ್ ನಷ್ಟು ಖಜಾನೆಯ ಅಕ್ಕಪಕ್ಕದ ನಿವಾಸಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ ಎಂದು ಹೆಬ್ರಿಯ ಮುಖಂಡರಾದ ನವೀನ್‌ ಕೆ. ಅಡ್ಯಂತಾಯ ಉದಯ ಕುಮಾರ್‌ ಶೆಟ್ಟಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!