ಮುನಿಯಾಲು : ಮುನಿಯಾಲು ಸಂಜೀವಿನಿ ಗೋಧಾಮ ಕೃಷಿ ಸಂಶೋಧನೆ, ಪ್ರಕೃತಿ ಸಂರಕ್ಷಣೆ, ಜೀವವೈವಿಧ್ಯ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಗೋಪೂಜೆ ನಡೆಯಿತು. ಪುರೋಹಿತ್ ದಾಮೋಧರ ಶರ್ಮ ಬಾರ್ಕೂರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಶ್ರೀ ಲಕ್ಷ್ಮೀ ಜನಾರ್ಧನ ಭಜನಾ ಮಂಡಳಿ ಎಳ್ಳಾರೆ ಹಾಗೂ ಸೇವಾ ಭಾರತಿ ಭಜನಾ ಮಂಡಳಿ ಸಚ್ಚರಿಪೇಟೆ ಮುಂಡ್ಕೂರು ಅವರಿಂದ ಭಜನೆ ನಡೆಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್, ಸವಿತಾ ಆರ್ ಆಚಾರ್, ರಕ್ಷತ್ ಆರ್ ಆಚಾರ್, ಕುಟುಂಬಸ್ಥರು, ಹಿರಿಯ ಸಾಹಿತಿ ಡಾ.ನಾ. ಮೊಗಸಾಲೆ ಸೇರಿದಂತೆ ಮುನಿಯಾಲು, ಹಿರಿಯಡ್ಕ, ಉಡುಪಿ, ಹೆಬ್ರಿ ಕಾರ್ಕಳ, ಮೂಡಬಿದರೆ, ಮಂಗಳೂರಿನ ಪ್ರಮುಖರು, ಗಣ್ಯರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.







