Monday, October 19, 2026
Homeಹೆಬ್ರಿಹೆಬ್ರಿಯಲ್ಲಿ ಸುಜ್ಞಾನ ನಿಧಿ ವಿತರಣಾ ಕಾರ್ಯಕ್ರಮ.

ಹೆಬ್ರಿಯಲ್ಲಿ ಸುಜ್ಞಾನ ನಿಧಿ ವಿತರಣಾ ಕಾರ್ಯಕ್ರಮ.

ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಹೆಬ್ರಿ ತಾಲ್ಲೂಕು ವತಿಯಿಂದ ಹೆಬ್ರಿ ಯೋಜನಾ ಕಚೇರಿಯ ಶಾರದಾ ನಂದ್ಯಪ್ಪ ಶೆಟ್ಟಿ ಸಭಾಭವನದಲ್ಲಿ ಸುಜ್ಞಾನ ನಿಧಿ ವಿತರಣಾ ಕಾರ್ಯಕ್ರಮ ಭಾನುವಾರ ಜರುಗಿತು.

ಹೆಬ್ರಿ ತಾಲ್ಲೂಕಿನ 55 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ವಿತರಿಸಲಾಯಿತು. ಹೆಬ್ರಿ ತಾಲ್ಲೂಕು ಜನಜಾಗೃತಿ ಸಮಿತಿಯ ಅಧ್ಯಕ್ಷ ವಾದಿರಾಜ ಶೆಟ್ಟಿ, ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ, ಜನಜಾಗೃತಿ ಸಮಿತಿಯ ಸದಸ್ಯ ಮನೋಜ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ಕೆಂಜೂರು, ರಘುರಾಮ ಶೆಟ್ಟಿ ಸಂತೆಕಟ್ಟೆ, ಹೆಬ್ರಿ ತಾಲೂಕು ಯೋಜನಾಧಿಕಾರಿ ರೇಷ್ಮಾ, ವಲಯಾಧ್ಯಕ್ಷರಾದ ಶಾಲಿನಿ ಭಂಡಾರಿ, ಜ್ಯೋತಿ ಉದಯ್, ಹರೀಶ್ ನಾಯ್ಕ್‌, 55 ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು, ಯೋಜನೆಯ ಕಾರ್ಯಕರ್ತರು, ನವಜೀವನ ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!