ಮುದ್ರಾಡಿ : ಉಡುಪಿ ಜಿಲ್ಲಾ ಮಟ್ಟದ 2026 – 27ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಸಮಿತಿ ಮತ್ತು ಸರ್ಕಾರಿ ಶಾಲೆ ಪ್ರಶಸ್ತಿಗೆ ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ಶೈಕ್ಷಣಿಕ ಮತ್ತು ಭೌತಿಕವಾಗಿ ಶಾಲೆಯು ಪ್ರಗತಿಯಲ್ಲಿದೆ.
ಸುಸಜ್ಜಿತ ಊಟದ ಹಾಲ್, ಔಷದೀಯ ವನ, ಶೌಚಾಲಯ, ಕುಟೀರ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ಶಾಲಾ ಸಭಾಂಗಣ ಮುಂತಾದ ಸೌಲಭ್ಯಗಳನ್ನು ಹೊಂದಿ ಶಾಲೆಯು ಮಾದರಿಯಾಗಿದೆ. ಶಾಲೆಗೆ ಸೌಲಭ್ಯಗಳನ್ನು ದಾನಿಗಳು, ಸಂಘಸಂಸ್ಥೆಗಳು ಹಾಗೂ ಸರ್ಕಾರದಿಂದ ಪಡೆಯಲಾಗಿದೆ.
ಶಾಲೆಯ ಯಶಸ್ವಿನ ಹಿಂದೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರ ಸತತ ಪರಿಶ್ರಮ, ಮುಖ್ಯ ಶಿಕ್ಷಕರ ಮತ್ತು ಅಧ್ಯಾಪಕ ವೃಂದದವರ ಸಹಕಾರ, ಹಳೆ ವಿದ್ಯಾರ್ಥಿಗಳ ಮಕ್ಕಳ ಪೋಷಕರ ಸಹಕಾರದಿಂದ ಸಾಧ್ಯವಾಗಿದೆ. ಶಾಲೆಯ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





