ಚಾರ : ಪರಿಸರ ಜಾಗೃತಿ ಮೂಡಿಸುವುದು ಇದೊಂದು ದೊಡ್ಡ ಸಾಹಸ ಯೋಜನೆಯದಾಗಿದೆ. ನಮ್ಮ ಸಹಕಾರ ನಿರಂತರವಾಗಿ ಇರುತ್ತದೆ. ಒಂದು ಗಿಡದ ಜವಾಬ್ದಾರಿಯನ್ನು ಇಬ್ಬರು ವಹಿಸಿ ಪಾಲನೆ ಪೋಷಣೆ ಮಾಡಿದಾಗ, ಕಾರ್ಯಕ್ಕೆ ಸಾರ್ಥಕತೆ ಬರುತ್ತದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಹೆಬ್ರಿ ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯ ಅಧಿಕಾರಿ ಶೇಖರ್ ಹೇಳಿದರು.
ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು ಇದರ ಆಶ್ರಯದಲ್ಲಿ ಹೆಬ್ರಿಯ ಚಾರ ಜವಾಹರ್ ನವೋದಯ ವಿದ್ಯಾಲಯದ ಸಹಯೋಗದೊಂದಿಗೆ ಸಾಮಾಜಿಕ ಅರಣ್ಯೀಕರಣ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಾರ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲೆ ರೇಮದೇವಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ ಮಾತನಾಡಿ, ವಿದ್ಯಾಲಯದಲ್ಲಿ 250 ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಗಿದೆ. ಗಿಡ ನಡೆಯುವುದರೊಂದಿಗೆ ಅದರ ಸಂರಕ್ಷಣೆ ಆಗಬೇಕು. ವಿದ್ಯಾ ಸಂಸ್ಥೆಯಲ್ಲಿ ಸಿಕ್ಕ ಸಹಕಾರದಿಂದ ಇಲ್ಲಿ ಯಶಸ್ವಿಯಾಗಿ ಜರುಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಜನಜಾಗೃತಿ ಸಮಿತಿಯ ಅಧ್ಯಕ್ಷರಾದ ನರೇಂದ್ರ ನಾಯಕ್, ಚಾರ ರಾಜೇಶ ಪೂಜಾರಿ, ಸುರೇಶ ಶೆಟ್ಟಿ, ವಸಂತ ಶೆಟ್ಟಿ, ಪ್ರಮುಖರಾದ ಮೋಹನದಾಸ್ ನಾಯಕ್ ಶಿವಪುರ, ಪ್ರವೀಣ್ ಹೆಗ್ಡೆ, ರಮೇಶ್ ಪೂಜಾರಿ, ಜ್ಯೋತಿ ಉದಯ, ರತ್ನಕರ ಪೂಜಾರಿ, ವೇಣುಗೋಪಾಲ್, ಸುಭಾಸ್, ಚಂದ್ರ ನಾಯ್ಕ್, ಶಾಲಿನಿ ಭಂಡಾರಿ, ಶೌರ್ಯ ತಂಡದ ಸದಸ್ಯರು ಇದ್ದರು.
ಲಹರಿ ಮತ್ತು ತಂಡದವರು ಪ್ರಾರ್ಥಿಸಿದರು. ಕೃಷಿ ಮೇಲ್ವಿಚಾರಕ ಉಮೇಶ್ ನಿರೂಪಿಸಿದರು. ಮೇಲ್ವಿಚಾರಕಿ ರೇವತಿ ಸ್ವಾಗತಿಸಿದರು.



