ಮಹಿಳೆಯರು ಸ್ವಾವಲಂಬಿಗಳಾಗಿ : ಯೋಜನಾಧಿಕಾರಿ ರೇಷ್ಮಾ.
ಚಾರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹೆಬ್ರಿ ತಾಲ್ಲೂಕು, ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆ ಉಡುಪಿ ಇದರ ವತಿಯಿಂದ ಮಹಿಳೆಯರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದ ಕೇಶ ವಿನ್ಯಾಸ ಹಾಗೂ ಡ್ರಿಪಿಂಗ್ ತರಬೇತಿಯ ಸಮಾರೋಪ ಕಾರ್ಯಕ್ರಮ ಚಾರದಲ್ಲಿ ನಡೆಯಿತು.
ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ ಮಾತನಾಡಿ ೩ ದಿನದಲ್ಲಿ ಪಡೆದ ಉತ್ತಮ ತರಬೇತಿಯನ್ನು ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಕೂಡ ಸ್ವಉದ್ಯೋಗಿ ಮಹಿಳೆಯರಾಗಿ ಕೆಲಸಗಳನ್ನು ನಿರ್ವಹಿಸಬೇಕು ಎಂದರು. ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ವಲಯ ಅಧ್ಯಕ್ಷೆ, ಜ್ಯೋತಿ ಹೆಬ್ರಿ ವಲಯದ ಒಕ್ಕೂಟದ ವಲಯ ಅಧ್ಯಕ್ಷೆ ಶಾಲಿನಿ ಭಂಡಾರಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರವತಿ, ಮೇಲ್ವಿಚಾರಕಿ ರೇವತಿ, ಪ್ರಮುಖರಾದ ಶಶಿಕಲಾ, ರುಕ್ಮಿಣಿ, ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಸಂದೀಪ್, ಲಾವಣ್ಯ ಉಪಸ್ಥಿತರಿದ್ದರು



