Sunday, October 18, 2026
Homeಕಾರ್ಕಳಜಿಎಸ್ ಬಿ ಸಮಾಜದ ಅರ್ಹರಿಗೆ ಕಾರ್ಕಳ ಹೊಸಸಂಜೆ ಬಳಗದಿಂದ 6.50 ಲಕ್ಷ ರೂ. ವಿತರಣೆ

ಜಿಎಸ್ ಬಿ ಸಮಾಜದ ಅರ್ಹರಿಗೆ ಕಾರ್ಕಳ ಹೊಸಸಂಜೆ ಬಳಗದಿಂದ 6.50 ಲಕ್ಷ ರೂ. ವಿತರಣೆ

ಪ್ರತಿಫಲಾಪೇಕ್ಷೆ ರಹಿತ ದಾನವೇ ಸರ್ವಶ್ರೇಷ್ಠ: ಡಾ . ಕಾರ್ತಿಕ್ ರಾವ್

ಕಾರ್ಕಳ: ದಾನಕ್ಕೆ ಪ್ರತಿಫಲಾಪೇಕ್ಷೆ ಇರಬಾರದು ಮತ್ತು ದಾನ ಪಡೆಯುವವನಲ್ಲಿ ಪಾತ್ರತೆ ಇರಬೇಕು. ಇದು ಎರಡು ದಾನದ ಪರಂಪರೆಯಲ್ಲಿ ಹರಿದು ಬಂದ ಷರತ್ತು. ದಾನ ಪಡೆದವನು ತಾನು ಶಕ್ತಿವಂತನಾದ ಬಳಿಕ ಆ ಶಕ್ತಿಯನ್ನು ಸಮಾಜಕ್ಕೆ ಹರಿಸುವ ಜವಾಬ್ದಾರಿಯನ್ನು ಮರೆಯಬಾರದು ಎಂದು ನಗರದ ಖ್ಯಾತ ವೈದ್ಯ ಡಾ .
ಕಾರ್ತಿಕ್ ರಾವ್ ಹೇಳಿದರು.

ಸಮಾಜದಲ್ಲಿ ಆಡ್ಯರೂ ಇದ್ದಾರೆ – ಇನ್ನೊಂದೆಡೆ ನಿಜವಾದ ಅರ್ಥದಲ್ಲಿ ದಾನ, ಸಹಾಯ ಪಡೆಯಬೇಕಾದ ಪಾತ್ರರೂ ಇದ್ದಾರೆ. ಈ ಎರಡೂ ದಡಗಳನ್ನು ಸಮನ್ವಯಗೊಳಿಸಿ ಸಮಾಜದಲ್ಲಿ ಸಮಾನತೆ ಮತ್ತು ಸಮೃದ್ಧಿಯನ್ನು ಸಾಧಿಸುವುದು ಬಹಳ ಮುಖ್ಯ. ದಾನ ನೀಡುವ ಕಾಯಕದಲ್ಲಿ ಆಢ್ಯರು, ಅಶಕ್ತರ ಬಳಿ ಸಾಗಬೇಕಾದ್ದೇ ಇಂದಿನ ಅಗತ್ಯ ಎಂದು ಕಾರ್ತಿಕ್ ರಾವ್ ಅವರು ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಕಾಶೀ ಮಠ ಸಭಾಭವನದಲ್ಲಿ , ಹೊಸಸಂಜೆ ಬಳಗದ ವತಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಆರ್ಥಿಕ ದುರ್ಬಲರಿಗೆ, ಅನಾರೋಗ್ಯಪೀಡಿತರಿಗೆ 6.50 ಲಕ್ಷ ರೂಪಾಯಿ ನೆರವು ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉದ್ಯಮಿಗಳಾದ ಗಣೇಶ ಕಾಮತ್, ಜಗದೀಶ ಮಲ್ಯ, ಕಮಲಾಕ್ಷ ನಾಯಕ್ ಜಾರ್ಕಳ , ಬೋಳ ಪ್ರಶಾಂತ ಕಾಮತ್, ಜಿ ಎಸ್ ಬಿ ಸಭಾ ಅಧ್ಯಕ್ಷ ನಾರಾಯಣ ನಾಯಕ್, ಸುಬ್ರಾಯ ಕಾಮತ್ ಬಂಟ್ವಾಳ , ತಂತ್ರಿ ಗುರುದತ್ ಭಟ್, ಸಮಾಜಸೇವಕ ವಿಶ್ವನಾಥ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿಶ್ರಾಂತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ದೇವಿಪ್ರಸಾದ್ ಶೆಣೈ ಸ್ವಾಗತಿಸಿದರು.

ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ವಿಘ್ನೇಶ್ ಪೈ ಕಾರ್ಯಕ್ರಮ ನಿರ್ವಹಿಸಿದರು. ಸೌಭಾಗ್ಯ ಎಸ್. ಕಿಣಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!