ಮೊಗವೀರ ಸಮುದಾಯ ಸಮುದ್ರವನ್ನು ನಂಬಿ ಬದುಕಿದವರು: ಕೋಟ ಶ್ರೀನಿವಾಸ ಪೂಜಾರಿ.
ಹೆಬ್ರಿ : ಮೊಗವೀರ ಸಮುದಾಯದವರು ಸಮುದ್ರವನ್ನೇ ನಂಬಿ ಬದುಕಿದವರು. ಆದರೆ ಬದಲಾದ ದಿನಗಳಲ್ಲಿ ಮೊಗವೀರ ಸಮುದಾಯದಿಂದಲೂ ಉನ್ನತ ಹುದ್ದೆಗಳಲ್ಲಿ ಅಲಂಕರಿಸುವವರು ಜಾಸ್ತಿಯಾಗುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇತ್ತೀಚಿನ ಮಕ್ಕಳು ಸ್ಥಾನವನ್ನು ಪಡೆಯುತ್ತಿರುವುದು ಸಮುದಾಯದಲ್ಲಿರುವವರ ಪ್ರತಿಭೆಯನ್ನು ತೋರಿಸುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಭಾನುವಾರ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಹೆಬ್ರಿ ಮೊಗವೀರ ಗ್ರಾಮಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಸಮುದಾಯಯನ್ನು ಶ್ಲಾಘಿಸಿ ಸಮುದಾಯಕ್ಕೆ ಬೇಕಾದ ಎಲ್ಲಾ ಬೆಂಬಲವನ್ನು ತಾವು ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮೊಗವೀರ ಸಮುದಾಯದವರು ದೇಶಾಭಿಮಾನಿಗಳಾಗಿದ್ದು ಅವರಲ್ಲಿರುವ ಶೌರ್ಯ ಸಾಹಸ ಮೆಚ್ಚತಕ್ಕದ್ದು. ಮೊಗವೀರ ಸಮುದಾಯಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ ನಮ್ಮ ಸಮುದಾಯದ ಇಷ್ಟು ಸಂಖ್ಯೆ ಜನರನ್ನು ಹೆಬ್ರಿ ಭಾಗದಲ್ಲಿ ಕಂಡಾಗ ತುಂಬಾ ಸಂತೋಷವಾಗಿದೆ. ಯುವಕರು ಹಿರಿಯರು ಕಿರಿಯರು ಎಲ್ಲರೂ ಸೇರಿ ಸಂಘಟನೆಯನ್ನು ಭದ್ರಗೊಳಿಸಬೇಕು ಮುಂದಿನ ದಿನಗಳಲ್ಲಿ ಸಂಘಟನೆಗೆ ಉತ್ತಮ ಹೆಸರು ಬರಬೇಕು ಎಂದು ಶುಭ ಹಾರೈಸಿದರು.
ಹೆಬ್ರಿ ಮೊಗವೀರ ಗ್ರಾಮಸಭಾದ ನೂತನ ಅಧ್ಯಕ್ಷ ಶರಣ್ ಪುತ್ರನ್ ಅಧ್ಯಕ್ಷತೆ ವಹಿಸಿ ಮಾಹಿತಿ ಗ್ರಾಮಸಭಾದ ಸಮಗ್ರ ಅಭಿವೃದ್ಧಿಗೆ ಸರ್ವರೂ ಸಹಕಾರ ನೀಡುವಂತೆ ಮನವಿ ಮಾಡಿ ಪದಗ್ರಹಣ ಸಂಭ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗ್ರಾಮ ಸಭೆಯ ಕಾರ್ಯಕ್ರಮಗಳು ನಡೆಯಿತು. ಬೆಣ್ಣೆಕುದ್ರು ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್ ಗ್ರಾಮ ಸಭೆಯ ನೀತಿ ನಿಯಮಗಳು ರೀತಿ ರಿವಾಜುಗಳು ಚೌಕಟ್ಟುಗಳನ್ನು ಸದಸ್ಯರಿಗೆ ಮನವರಿಕೆ ಮಾಡಿದರು.
ಬಜೆ ಮೇಲ್ಸಾಲು ಹಿರಿಯಡ್ಕ 17 ಮೊಗವೀರ ಗ್ರಾಮ ಸಭೆಗಳ ಒಕ್ಕೂಟ ಅಧ್ಯಕ್ಷ ಶ್ರೀಧರ ಬಜೆ ಮಾತನಾಡಿ ನಮ್ಮ ಸಹಕಾರ ಯಾವಾಗಲೂ ಈ ಗ್ರಾಮ ಸಭೆಯ ಜೊತೆ ಇರುತ್ತದೆ. ಹೆಬ್ರಿಯು ಅತಿ ದೊಡ್ಡದಾದ ಗ್ರಾಮ ಸಭೆಯಾಗಿದ್ದು ಎಲ್ಲರೂ ಉತ್ತಮವಾಗಿ ಇಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಶೈಕ್ಷಣಿಕ ಸಾಧಕರು, ಗುರಿಕಾರರು ಹಾಗೂ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು.
ಹೆಬ್ರಿ ಮೊಗವೀರ ಗ್ರಾಮಸಭಾದ ಗೌರವಾಧ್ಯಕ್ಷ ಹೆಚ್.ಬಿ.ಸುರೇಶ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರತಿಮಾ ಸುರೇಶ್ ಸ್ವಾಗತಿಸಿದರು. ಲಲಿತಾ ಎಂ ವಂದಿಸಿದರು. ದಿವಾಕರ ಮರಕಾಲ ಎಸ್ ನಿರೂಪಿಸಿದರು.



