ಹೆಬ್ರಿ : ಹೆಬ್ರಿ ತಾಲ್ಲೂಕಿನಾದ್ಯಂತ ಸೋಮವಾರದಿಂದ ನವರಾತ್ರಿಯ ಸಂಭ್ರಮ ವೈಭವದಿಂದ ನಡೆಯುತ್ತಿದೆ. ಹೆಬ್ರಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶ್ರೀ ನವರಾತ್ರಿಯ ಪ್ರಯುಕ್ತ ಭಾನುವಾರ ಶ್ರೀದುರ್ಗಾ ಪೂಜೆ ನಡೆಯಿತು. ತಾಣ ಅರ್ಧನಾರೀಶ್ವರ ದೇವಸ್ಥಾನ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಭಕ್ರೆ ಶ್ರೀ ಭದ್ರಕಾಳಿ ದೇವಸ್ಥಾನ, ಶಿವಪುರ ಬ್ಯಾಣ ಗದ್ದುಗೆ, ಶಿವಪುರ ಐಬೆಟ್ಟು ಗದ್ದುಗೆ, ಮುನಿಯಾಲು ಮಾರಿಯಮ್ಮ ದೇವಸ್ಥಾನ, ಪಡುಕುಡೂರು ಶ್ರೀ ಭದ್ರಕಾಳಿ ದೇವಸ್ಥಾನ, ಮುನಿಯಾಲು ಮಾರಿಯಮ್ಮ ದೇವಸ್ಥಾನ, ಕಡ್ತಲ ಸಿರಿಬೈಲು ಶ್ರೀ ಭರ್ಬರೇಶ್ವರ ದೇವಸ್ಥಾನ ಸೇರಿದಂತೆ ಹೆಬ್ರಿಯ ವಿವಿಧ ದೇವಸ್ಥಾನ, ಗದ್ದಿಗೆ ಅಮ್ಮನವರ ಸನ್ನಿಧಿ, ದೈವಸ್ಥಾನಗಳು, ಹಾಗೂ ಮನೆಮನೆಯಲ್ಲೂ ನವರಾತ್ರಿಯ ಸಂಭ್ರಮ ನಡೆಯುತ್ತಿದೆ.
ಹೆಬ್ರಿ ತಾಲ್ಲೂಕಿನ ವಿವಿದೆಡೆ ನವರಾತ್ರಿ ಸಂಭ್ರಮ.



