Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಬಲ್ಲಾಡಿ ಮಠದಲ್ಲಿ ಮುನಿಯಾಲು ರಾಜೇಶ್ ಪೈ ದಂಪತಿಗಳಿಗೆ ಸನ್ಮಾನ.

ಬಲ್ಲಾಡಿ ಮಠದಲ್ಲಿ ಮುನಿಯಾಲು ರಾಜೇಶ್ ಪೈ ದಂಪತಿಗಳಿಗೆ ಸನ್ಮಾನ.

ಸಹಪಾಠಿಗಳ ಗೌರವ  ನನ್ನ ಸೌಭಾಗ್ಯ : ರಾಜೇಶ್ ಪೈ.

ಮುದ್ರಾಡಿ : ಮುನಿಯಾಲು ಕೆಪಿಎಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ಪೈ ದಕ್ಷಿಣ ಆಫ್ರಿಕದಲ್ಲಿ ನೆಲೆಸಿ ಔಷಧೀಯ ಉದ್ಯಮ ಕ್ಷೇತ್ರದಲ್ಲಿ ನಡೆಸಿದ ವಿಶಿಷ್ಟ ಸಾಧನೆಗಾಗಿ ಮಣಿಪಾಲ ಮಾಹೆ ವಿಶ್ವವಿದ್ಯಾಲಯ ವತಿಯಿಂದ ನೀಡಿದ ಪ್ರತಿಷ್ಠಿತ ರಾಷ್ಟ್ರೀಯ ಸಿಜಿಎಂಪಿ ಅವಾರ್ಡ್ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿ 1991-92 ನೆ ಸಾಲಿನ ಸಹಪಾಠಿಗಳು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದಲ್ಲಿ ಸೇರಿ ಮುನಿಯಾಲು ರಾಜೇಶ್ ಪೈ ದಂಪತಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಸಹಪಾಠಿಗಳಾದ ಕೃಷ್ಣಕಾಂತ್ ನಾಯಕ್, ದಿನೇಶ್ ಶೆಟ್ಟಿ ಮುಟ್ಲುಪಾಡಿ, ರವಿ ಶೆಟ್ಟಿ ಮುಟ್ಲುಪಾಡಿ, ನಾಗರಾಜ್ ಪೈ ಮುಳ್ಕಾಡು ರಾಜೇಶ್ ಪೈ ಅವರೊಂದಿಗೆ ಕಳೆದ ಕ್ಷಣಗಳನ್ನು, ಅವರ ಸಾಧನೆಗಳ ಬಗ್ಗೆ ಮಾತನಾಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜೇಶ್ ಪೈ  ನನ್ನ ಸಾಧನೆಗೆ ನಾನು ಕಲಿತ ಶಾಲೆ, ಕಲಿಸಿದ ಗುರುಗಳು, ಗುರುಹಿರಿಯರ ಆಶೀರ್ವಾದ ಹಾಗೂ ಸಹಪಾಠಿಗಳ ಪ್ರೋತ್ಸಾಹವೇ ಕಾರಣವಾಗಿದೆ. ದಕ್ಷಿಣ ಆಫ್ರಿಕದಲ್ಲಿ ನೆಲೆಸಿದ್ದರೂ ತವರು ಜಿಲ್ಲೆಯ ಮಣಿಪಾಲ ಮಾಹೆ ವಿಶ್ವವಿದ್ಯಾಲಯದಲ್ಲಿ ಗೌರವ ದೊರಕಿರುವುದು ಹಾಗೂ ಸಹಪಾಠಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಅತ್ಯಂತ ಸಂತೋಷಪಡುತ್ತೇನೆ. ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಸಂತಸ ಹಂಚಿಕೊಂಡರು.

ಮಧುಸೂದನ್ ಭಟ್, ರಾಜೇಶ್ ಪೈ ಪತ್ನಿ ವನಿತಾ, ಪುತ್ರಿ ಸಾಫ್ಟ್ ವೇರ್ ಎಂಜಿನಿಯರ್ ರಕ್ಷಾ, ರಮ್ಯಾ ಭಟ್ ಬಲ್ಲಾಡಿ, ಶುಭಧರ ಪೈ ಹೆಬ್ರಿ, ಇಂಪನಾ ಭಟ್ ಬಲ್ಲಾಡಿ ಉಪಸ್ಥಿತರಿದ್ದರು. ಸಹಪಾಠಿ ಅಶೋಕ್ ಪೂಜಾರಿ ಮುದ್ರಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಪಾಠಿ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ಸಹಪಾಠಿ ರೇವತಿ ನಾಯಕ್ ಕಡ್ತಲ ವಂದಿಸಿದರು.

 

 

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!