Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಅಮಿತ ಆರ್‌ ಹೆಗ್ಡೆ ಅವರಿಗೆ ಕಮಲಮ್ಮ ಸೇವರತ್ನ ಪ್ರಶಸ್ತಿ.

ಅಮಿತ ಆರ್‌ ಹೆಗ್ಡೆ ಅವರಿಗೆ ಕಮಲಮ್ಮ ಸೇವರತ್ನ ಪ್ರಶಸ್ತಿ.

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್‌ ೨೨ ರ ತನಕ ನಡೆಯುವ ೨೬ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ ೪೧ನೇ ವರ್ಷದ ಸಂಭ್ರಮದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರ ಮಹಾಮಾತೆ ಕಮಲ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಅವರ ಸಂಸ್ಮರಣೆಗಾಗಿ ನೀಡುವ ಪ್ರಥಮ ವರ್ಷದ ಮುದ್ರಾಡಿ ಕಮಲಮ್ಮ ಸೇವರತ್ನ ಪ್ರಶಸ್ತಿಗೆ ಶೆಟ್ಟಿಬೆಟ್ಟು ಶ್ರೀ ವನದುರ್ಗಾದೇವಿ ಕ್ಷೇತ್ರದ ಅಮಿತ ಆರ್‌ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದ ಧರ್ಮಾಧಿಕಾರಿ, ನಮತುಳುವೆರ್‌ ಕಲಾ ಸಂಘಟನೆಯ ಅಧ್ಯಕ್ಷ ವಿಜಯಕೀರ್ತಿ ಸುಕುಮಾರ್‌ ಮೋಹನ್‌ ತಿಳಿಸಿದ್ದಾರೆ. ಅಮಿತ ಆರ್. ಹೆಗ್ಡೆ ಅವರು ರಾಧಾಸಂಜೀವ ನಿವಾಸ ಶೆಟ್ಟಬೆಟ್ಟು ನಡುಮನೆ ಕುಟುಂಬದವರು, ಶ್ರೀ ವನದುರ್ಗಾ ದೇವಿ ಕ್ಷೇತ್ರವನ್ನು ಮುನ್ನಡೆಸುತಿದ್ದಾರೆ. ತಮ್ಮ ಜೀವನದಲ್ಲಿ ಹಲವಾರು ಏರುಪೇರುಗಳನ್ನು ಕಂಡು, ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಇಂದು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿರೂಂಡಿರುವ ಸಾಧಕಿ. ಕಲೆ, ಉದ್ಯಮ, ವಿಮಾ ಕ್ಷೇತ್ರ, ಧಾರ್ಮಿಕ ಹಾಗೂ ಸಮಾಜಮುಖಿ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ನವರಂಗೋತ್ಸವದ ಸಂಭ್ರಮದಲ್ಲಿ ಇದೇ ೨೦ ರಂದು ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ವಜ್ರದೇಹಿ ಮಠಾದೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಯಕ್ಷದ್ರುವ ಪಟ್ಲ ಸತೀಶ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅಯೋಧ್ಯ ಹೊಟೇಲ್‌ ಉದ್ಯಮಿ ನಂದ್ರೋಳ್ಳಿ ಪ್ರಭಾಕರ ಶೇಖರ ಶೆಟ್ಟಿ, ಪ್ರಶಸ್ತಿಪುರಸ್ಕೃತ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಭಾಗವಹಿಸುವರು.

ಅಮಿತ ಆರ್. ಹೆಗ್ಡೆ ಜೀವನ ಪರಿಚಯ :

ಅಮಿತ ಆರ್. ಹೆಗ್ಡೆ ಅವರು ರಾಧಾಸಂಜೀವ ನಿವಾಸ ಶೆಟ್ಟಬೆಟ್ಟು ನಡುಮನೆ ಕುಟುಂಬದವರು, ಶ್ರೀ ವನದುರ್ಗಾ ದೇವಿ ಕ್ಷೇತ್ರವನ್ನು ಮುನ್ನಡೆಸುತಿದ್ದಾರೆ. ತಮ್ಮ ಜೀವನದಲ್ಲಿ ಹಲವಾರು ಏರುಪೇರುಗಳನ್ನು ಕಂಡು, ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಇಂದು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿರೂಂಡಿರುವ ಸಾಧಕಿ. ಕಲೆ, ಉದ್ಯಮ, ವಿಮಾ ಕ್ಷೇತ್ರ, ಧಾರ್ಮಿಕ ಹಾಗೂ ಸಮಾಜಮುಖಿ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

1998ರಲ್ಲಿ ಧಾರಾವಾಹಿ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಅವರು, “ಶಿಕಾರಿ, ಬಣ್ಣ, ಹೊಂಬಾಳೆ, ಕ್ರೈಸ್ಟೋರಿ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಸಿದ್ದಾರೆ. ತುಳು ಧಾರಾವಾಹಿಯಾದ ‘ಜೀವ’ ಹಾಗೂ ಜೀ ಕನ್ನಡ ಮತ್ತು ಉದಯ ಟಿವಿಯ ವಿವಿಧ ಕಾರ್ಯಕ್ರಮಗಳಲ್ಲಿಯೂ ಕೆಲಸ ಮಾಡಿದ್ದಾರೆ. ಉದಯ ಟಿಯಯ ‘ಕ್ರೈಂ ಟೈಮ್’ ಕಾರ್ಯಕ್ರಮದ ಜೊತೆಗೆ “ತರಂಗ” ಮತ್ತು “ರೂಪತರಂಗ” ಮುಂತಾದ ವೇದಿಕೆಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

‘ಗಂಗೋತ್ರಿ’ ರಾರಾವಾಹಿಯಲ್ಲಿ ಖಳನಾಯಕಿಯ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದ ಅವರು, ‘ಕರಿಯ ಕಟ್ಟ ಕರಿಯಮಣಿ ಸೇರಿದಂತೆ ಹಲವಾರು ನಾಟಕ ಹಾಗೂ ಶೋಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಉತ್ತಮ ಅಭಿನಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲ “ಅತ್ಯುತ್ತಮ ನಟಿ” ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ.

2007ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದ ಅವರು, ಅಲ್ಲಿ ಹೋಟೆಲ್ ಇಂಡಸ್ಟ್ರೀಸ್ ಹಾಗೂ ಸ್ಪಾ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದರು.

ವಿಮಾ ಕ್ಷೇತ್ರದಲ್ಲಿಯೂ ಅಮಿತ ಆರ್‌ ಹೆಗ್ಡೆ ದೀರ್ಘಕಾಲದ ಸೇವೆಯನ್ನು ಸಲ್ಲಿಸಿದ್ದಾರೆ. 2005ರಲ್ಲಿ ಐಸಿಐಸಿಐ ಸಂಸ್ಥೆಯಲ್ಲಿ ಅಡೈಸರ್ ಆಗಿ ತಮ್ಮ ಸೇವೆಯನ್ನು ಆರಂಭಿಸಿ, ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ಮೈಸೂರು ಶಾಖೆಯ ಸ್ಟಾರ್ ಹೆಲ್ತ ಇನ್ನೂರನ್ಸ್ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ಅಡೈಸರ್‌ ಆಗಿ ಕಾರ್ಯನಿರ್ವಹಿಸಿದ್ದು, ಕಳೆದ ಒಂದು ವರ್ಷದಿಂದ ಅಧಿತ್ಯ ಬಿರ್ಲಾ ಸಂಸ್ಥೆಯಲ್ಲಿ ಅಡೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೇವರಲ್ಲಿ ಅಪಾರ ಭಕ್ತಿಯನ್ನು ಹೊಂದಿರುವ ಅಮಿತ ಆರ್. ಹೆಗ್ಡೆ ಅವರು 2024ರಲ್ಲಿ “ವನದುರ್ಗಾ ದೇವಿ ಕ್ಷೇತ್ರವನ್ನು ನಿರ್ಮಿಸುವ ಜೊತೆಗೆ, ನಾಗದೇವರು ಹಾಗೂ ರಕ್ತೇಶ್ವರಿ ದೇವರ ಸನ್ನಿಧಿಯನ್ನೂ ನಿರ್ಮಿಸಿದ್ದಾರೆ. 2024ರಿಂದ ಈ ಕ್ಷೇತ್ರದಲ್ಲಿ ನವರಾತ್ರಿ ಹಾಗೂ ವಾರ್ಷಿಕ ಉತ್ಸವಗಳನ್ನು ಭಕ್ತಿಭಾವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ಸುಮಾರು ‘2,000ಕ್ಕೂ ಹೆಚ್ಚು ಭಕ್ತರು’ ಈ ಕ್ಷೇತ್ರಕ್ಕ ಭೇಟಿ ನೀಡುತ್ತಿದ್ದಾರೆ.

2019ರಲ್ಲಿ ತಮ್ಮ ಊರಿನಲ್ಲಿ ‘ರಾಧಾ ಸಂಜೀವ ನಿವಾಸ’ ಎಂಬ ಸ್ವಗೃಹವನ್ನು ನಿರ್ಮಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದ ಭೂಮಿ ವ್ಯವಹಾರದಲ್ಲಿಯೂ ತೊಡಗಿಸಿದೊಂಡಿರುವ ಅವರು, 2026ರಲ್ಲಿ ವನದುರ್ಗಾ ದೇವಿ ಕ್ಷೇತ್ರದ ಖರ್ಚುವೆಚ್ಚಗಳಿಗೆ ನೆರವಾಗುವ ಉದ್ದೇಶದಿಂದ ಪರ್ಕಳದಲ್ಲಿ ‘ವನದುರ್ಗಾ ಡಿಜಿಟಲ್’ ಎಂದ ಡಿಸ್ಕ್‌ನಿಂಗ್ ಮತ್ತು ಪ್ರೀಂಟರ್ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮಿಂದಾದಷ್ಟು ಬಡ ಹಾಗೂ ಅಗತ್ಯವಿರುವ ಕುಟುಂಬಗಳ ಮದುವೆ ಕಾರ್ಯಗಳಿಗೆ ಸೀರೆ ಮತ್ತು ಮಂಗಳಸೂತ್ರ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಕ್ರಿಕೆಟ್‌ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಅಲ್ಲದೆ, ಕನಕಪುರದಲ್ಲಿರುವ ಒಂದು ಆಶ್ರಮಕ್ಕೂ ಸಹಾಯ ಮಾಡುತ್ತಿದ್ದಾರೆ.

ಹೀಗೆ ಕಲೆ, ಉದ್ಯಮ, ಧಾರ್ಮಿಕ ಸೇವೆ, ಸಮಾಜಸೇವೆ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜೀವನದಲ್ಲಿ ವಿದುರಾದ ಏರುಪೇರುಗಳನ್ನು ಮೆಟ್ಟ ನಿಂತು ತಮ್ಮದೇ ಆದ ಯಶಸ್ಸಿನ ಹಾದಿಯನ್ನು ಸಾಗುತ್ತಿರುವವರು “ಅಮಿತ ಅರ್, ಹೆಗ್ಡೆ ಅದ್ಭುತ ಸಾಧಕಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!