Sunday, October 18, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. - 26ನೇ ವರ್ಷದ ನವರಂಗೋತ್ಸವ - ಸನ್ಮಾನ.

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ. – 26ನೇ ವರ್ಷದ ನವರಂಗೋತ್ಸವ – ಸನ್ಮಾನ.

 

ಕಂಸವಧೆ ಯಕ್ಷಗಾನ ತಾಳಮದ್ದಳೆ.

 

ಮುದ್ರಾಡಿ : ಮುದ್ರಾಡಿ ನಾಟ್ಕದೂರು ನಮ ತುಳುವೆರ್‌ ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ನಾಟ್ಕದೂರು ಬಿ.ವಿ.ಕಾರಂತ ಬಯಲು ರಂಗ ಮಂದಿರದಲ್ಲಿ ಅಕ್ಟೋಬರ್‌ 22 ರ ತನಕ ನಡೆಯುವ 26ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮದ 5ನೇ ದಿನದ ಕಾರ್ಯಕ್ರಮ ಗುರುವಾರ ನಡೆಯಿತು.

ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠ್ಠಲ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ ತುಳುವೆರ್‌ ಕಲಾ ಸಂಘಟನೆಯ ರಂಗಸೇವೆಯನ್ನು ಸ್ಮರಿಸಿದರು.

 

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ಮತ್ತು ಆದಿಶಕ್ತಿ ಕ್ಷೇತ್ರದಲ್ಲಿ ನಿರಂತರ ಸೇವೆಯನ್ನು ಮಾಡುತ್ತಿರುವ ರಾಘವ ಸಿ ಅಂಚನ್‌ ಉಚ್ಚಿಲ ಮತ್ತು ಸುಧೀರ್‌ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ನಾಟ್ಕ ಮುದ್ರಾಡಿ ಅಧ್ಯಕ್ಷ ರಂಗ ನಿರ್ದೇಶಕ ಸುಕುಮಾರ್‌ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಭಾಗವತ ಡಾ. ಶ್ರೇಯಸ್‌ ನಾಯಕ್‌ ಮುದ್ರಾಡಿ, ರಂಗನಟಿ ಸುಗಂಧಿ ಉಮೇಶ ಕಲ್ಮಾಡಿ, ವಾಣಿ ಸುಕುಮಾರ್‌ ಮೋಹನ್‌ ಮುಂತಾದವರು ಉಪಸ್ಥಿತರಿದ್ದರು. ರಚಿತಾ ಕುಲಾಲ್‌ ಕಬ್ಬಿನಾಲೆ ನಿರೂಪಿಸಿ ಸ್ವಾಗತಿಸಿದರು.

ಮುದ್ರಾಡಿಯ ಡಾ. ಶ್ರೇಯಸ್‌ ನಾಯಕ್‌ ಭಾಗವತಿಕೆಯಲ್ಲಿ ಹೆಬ್ರಿ ಡಾ.ಸುಲತಾ ವಿದ್ಯಾಧರ ಹೆಗ್ಡೆ ಮತ್ತು ಬಳಗ ಮೂಡಬಿದರೆ ಅವರ ವತಿಯಿಂದ ಯಕ್ಷಗಾನ ತಾಳಮದ್ದಳೆ ಕಂಸವಧೆ ನಡೆಯಿತು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!