Sunday, October 18, 2026
Homeಶಿವಪುರ ಗ್ರಾಮ ಪಂಚಾಯತ್‌ಶಿವಪುರ ಗ್ರಾಮ ಪಂಚಾಯಿತಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ.

ಶಿವಪುರ ಗ್ರಾಮ ಪಂಚಾಯಿತಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ.

ಶಿವಪುರ : ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಶನಿವಾರ ಭೇಟಿ ನೀಡಿದರು.

 

 

 

ಶಿವಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಾಂತಾ ಸಂಸದರನ್ನು ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಮತ್ತು ಸ್ಥಳೀಯ ಮುಖಂಡರು ಸಂಸದರನ್ನು ಗೌರವಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಗ್ರಾಮ ಪಂಚಾಯತಿಯ ಕಟ್ಟಡದ ನೆಲ ಬಿರುಕು ಬಿಟ್ಟು ಹಾನಿಯಾಗಿದ್ದು ಹೆದ್ದಾರಿ ಇಲಾಖೆಯ ಮೂಲಕ ಸರಿ ಪಡಿಸಿಕೊಡುವಂತೆ ಸಂಸದರಿಗೆ ಮನವಿ ನೀಡಲಾಯಿತು.

ಶಿವಪುರದ ಮುಖಂಡ ಸುರೇಶ ಶೆಟ್ಟಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಪೂರ್ವಾಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಗ್ರಾಮ ಪಂಚಾಯಿತಿ ಪೂರ್ವ ಉಪಾಧ್ಯಕ್ಷ ಶಂಕರ ಬಡ್ಕಿಲ್ಲಾಯ, ಮಾಜಿ ಅಧ್ಯಕ್ಷ ಮೂರ್ಸಾಲು ಮೋಹನದಾಸ ನಾಯಕ್‌, ಶೇಖರ ಶೆಟ್ಟಿ, ಗ್ರಾಮ ಪಂಚಾಯಿತಿ ಸಿಬಂದ್ಧಿ ವರ್ಗದವರು, ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!