Thursday, November 12, 2026
Homeಕಾರ್ಕಳಕೆಎಸ್‌ಎಸ್‌ಐಡಿಸಿ ನಿರ್ದೇಶಕರಾಗಿ ಶೇಖರ ಮಡಿವಾಳ್‌ ನೇಮಕ.

ಕೆಎಸ್‌ಎಸ್‌ಐಡಿಸಿ ನಿರ್ದೇಶಕರಾಗಿ ಶೇಖರ ಮಡಿವಾಳ್‌ ನೇಮಕ.

ಕಾರ್ಕಳ : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ( ಕೆಎಸ್‌ಎಸ್‌ಐಡಿಸಿ) ನಿರ್ದೇಶಕರಾಗಿ ಕಾರ್ಕಳ ಕ್ಷೇತ್ರದ ಹಿರಿಯ ಕಾಂಗ್ರೆಸ್‌ ನಾಯಕರಾದ ಖ್ಯಾತ ನ್ಯಾಯಾದಿ ಎಚ್‌. ಶೇಖರ ಮಡಿವಾಳ ಅವರನ್ನು ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ನಿಕಟವರ್ತಿಯಾಗಿ ಕಾಂಗ್ರೆಸ್‌ ಪಕ್ಷಕ್ಕೆ ಅಪಾರವಾದ ಸೇವೆಯನ್ನು ನೀಡಿದ್ದಾರೆ. ಕಾರ್ಕಳ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ ಆಪ್ತರಾಗಿ ನಿರಂತರವಾಗಿ ಅವರೊಂದಿಗಿದ್ದು ಸೇವೆಯನ್ನು ನೀಡಿದ್ದಾರೆ. ಹೆಬ್ರಿ ಮೂಲದವರಾದ ಎಚ್.‌ ಶೇಖರ ಮಾಡಿವಾಳ್‌ ಕಾರ್ಕಳದಲ್ಲಿ ನೆಲೆಸಿದ್ದು ಸಿವಿಲ್‌, ಕ್ರಿಮಿನಲ್‌ ಖ್ಯಾತ ವಕೀಲರಾಗಿ, ವಿವಿಧ ಹಂತದ ನ್ಯಾಯದ ಹೋರಾಟ ಮಾಡಿ ಜನಮನ್ನಣೆ ಪಡೆದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮೂಲಕ ಜನಸೇವೆಗೆ ಪಾದಾರ್ಪಣೆ ಮಾಡಿದ್ದಾರೆ. ಪಕ್ಷದ ವಿವಿಧ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾರ್ಕಳ ತಾಲ್ಲೂಕು ಪಂಚಾಯತ್‌ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಬಳಿಕ ಉಡುಪಿ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ಶೇಖರ ಮಡಿವಾಳ್‌ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಪಿಎಂಸಿ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಗುರು ಮಾಚಿದೇವ ಕೋ ಅಪರೇಟಿವ್‌ ಸೊಸೈಟಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!