ಹೆಬ್ರಿ : ಹೆಬ್ರಿ ಬಸ್ ನಿಲ್ದಾಣದ ಸಮೀಪದಲ್ಲಿ ನ್ಯೂಸ್ ಪೇಪರ್ ಕಟ್ಟೆಗೆ ಚಿಕ್ಕಮಗಳೂರಿಗೆ ತೆರಳುವಾಗ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಗುರುವಾರ ಮುಂಜಾನೆ ಆಗಮಿಸಿ ಪತ್ರಿಕಾ ಏಜೆಂಟ್ ಮತ್ತು ಪತ್ರಿಕಾ ವಿತರಕರಲ್ಲಿ ಕುಶಲೋಪರಿ ನಡೆಸಿದರು. ರಸ್ತೆಯಲ್ಲೇ ನಿಂತು ಚಹಾ ಕುಡಿದರು. ಪತ್ರಿಕಾ ಏಜೆಂಟ್ರಾದ ಪಧ್ಮನಾಭ ನಾಯಕ್, ಹೆಬ್ರಿ ವಿಠ್ಠಲ ಪೂಜಾರಿ ಕರ್ಜೆ, ನಿವೃತ್ತ ಮುಖ್ಯ ಶಿಕ್ಷಕರಾದ ಮುರಳೀಧರ ಭಟ್, ಆಹಾರೋಧ್ಯಮಿ ಚಾರ ಗೋಪಾಲ ನಾಯ್ಕ್, ಸ್ಥಳೀಯರು, ವಿವಿಧ ಪತ್ರಿಕಾ ಏಜೆಂಟ್ ಮತ್ತು ವಿತರಕರಿದ್ದರು.
ಹೆಬ್ರಿ ಪೇಪರ್ ಕಟ್ಟೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ.



