Thursday, September 24, 2026
Homeಹೆಬ್ರಿಬಸ್ರೂರು ಎನ್ ಎನ್ ಓ ವತಿಯಿಂದ ಕುರಾನ್ ವಿತರಣೆ

ಬಸ್ರೂರು ಎನ್ ಎನ್ ಓ ವತಿಯಿಂದ ಕುರಾನ್ ವಿತರಣೆ

ನಮ್ಮ ನಾಡ ಒಕ್ಕೂಟ (ರಿ), ಹೆಬ್ರಿ ಘಟಕದ ವತಿಯಿಂದ ನೂರಾನಿ ಜಾಮಿಯಾ ಮಸ್ಜಿದ್, ಪಾನಕದಕಟ್ಟೆ ಇದರ ಮದ್ರಸ ವಿದ್ಯಾರ್ಥಿಗಳಿಗೆ ಪವಿತ್ರ ಕುರ್‌ಆನ್ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನೂರಾನಿ ಜಾಮಿಯಾ ಮಸ್ಜಿದ್, ಪಾನಕದಕಟ್ಟೆ, ಬಸ್ರೂರು ನಲ್ಲಿ ನಡೆಯಿತು.

ಮದ್ರಸ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಪವಿತ್ರ ಕುರ್‌ಆನ್ ಪ್ರತಿಗಳನ್ನು ಖತೀಬರಾದ ಮೌಲಾನಾ ಸುಹೇಲ್ ಹಾಗೂ ಜಮಾಅತ್ ಸಮಿತಿಯ ಕಾರ್ಯದರ್ಶಿಗಳಾದ ನವಾಝ್ ಸಾಹೇಬ್ ಬಸ್ರೂರು ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ (ರಿ) ಹೆಬ್ರಿ ಘಟಕದ ಅಧ್ಯಕ್ಷರಾದ ಅನ್ಸಾರ್ ಹೊಸಂಗಡಿ ಎನ್ ಎನ್ ಓ ಸೆಂಟ್ರಲ್ ಸಮಿತಿಯ ಟ್ರಸ್ಟಿ ಹಾಗೂ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್ ಬೆಳ್ವೆ ಸ್ಥಳೀಯರಾದ ಎನ್ ಎಮ್ ಘನಿ ಸಾಹೇಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅರ್ಫಾತ್ ಅವರು ಕಾರ್ಯಕ್ರಮನಿರೂಪಿಸಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!