Sunday, August 9, 2026
Homeವರಂಗ ಗ್ರಾಮ ಪಂಚಾಯತ್‌ವರಂಗ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ, ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು...

ವರಂಗ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ, ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಆಯ್ಕೆ.

ವರಂಗ : ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದೆ.
ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಪೂರ್ವಾಧ್ಯಕ್ಷರಾದ ವರಂಗ ಲಕ್ಷ್ಮಣ ಆಚಾರ್‌ ನೂತನ ಅಧ್ಯಕ್ಷ ಶುಭದರ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.

ನಿರ್ದೇಶಕರಾದ ಪಡುಕುಡೂರು ಜಗದೀಶ ಹೆಗ್ಡೆ, ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಗೋಪಿನಾಥ ಭಟ್ ಮುನಿಯಾಲು, ಕೃಷ್ಣ ಆಚಾರ್ಯ ಮುದ್ರಾಡಿ, ಸುಧನ್ವ ಪಾಣಾರ ಮುದ್ರಾಡಿ, ಸುರೇಶ್ ಶೆಟ್ಟಿಗಾರ್ ಮುದ್ರಾಡಿ, ಇಂದಿರಾ ಪೂಜಾರಿ ವರಂಗ, ಶಶಿಕಲಾ ಡಿ ಪೂಜಾರಿ, ಸುರೇಶ್ ನಾಯ್ಕ್ ಮುನಿಯಾಲು ಚಟ್ಕಲ್ ಪಾದೆ,ಮೇಲ್ವಿಚಾರಕ ಜಯಂತ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಪೈ ಹಾಜರಿದ್ದರು.

ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ವಿವಿಧ ಪ್ರಮುಖರಾದ ಜಯಕರ ಶೆಟ್ಟಿ ಮುದ್ರಾಡಿ, ಪಾಂಡುರಂಗ ಪ್ರಭು ಮುದ್ರಾಡಿ, ದಿನೇಶ ಶೆಟ್ಟಿ ಹೆಬ್ರಿ, ಪ್ರಸನ್ನ ಶೆಟ್ಟಿ ಪಡುಕುಡೂರು, ಹರೀಶ ಶೆಟ್ಟಿ‌ನಾಡ್ಪಾಲು, ಸತೀಶ್ ಸೇರಿಗಾರ್, ರಘುನಾಥ ಪೂಜಾರಿ ಮುನಿಯಾಲು, ಮುನಿಯಾಲು, ಮುದ್ರಾಡಿಯ ವಿವಿಧ ಪ್ರಮುಖರು ಹಾಗೂ ಸಂಘದ ಸಿಬಂದ್ಧಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments