Sunday, August 9, 2026
Homeಹೆಬ್ರಿಹೆಬ್ರಿಯ ಬಲ್ಲೆ ಶ್ರೀಕಾಡ್ಯನಾಗ ಸನ್ನಿಧಿಯಲ್ಲಿ ವನಮಹೋತ್ಸವ

ಹೆಬ್ರಿಯ ಬಲ್ಲೆ ಶ್ರೀಕಾಡ್ಯನಾಗ ಸನ್ನಿಧಿಯಲ್ಲಿ ವನಮಹೋತ್ಸವ

ಹೆಬ್ರಿ : ಹೆಬ್ರಿಯ ಬಲ್ಲೆ ಶ್ರೀಕಾಡ್ಯನಾಗ ಸನ್ನಿಧಿಯಲ್ಲಿ ಗುರುವಾರ ಸಂಕ್ರಾಂತಿ ಪೂಜೆಯ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಾಗೂ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ರಘುರಾಮ ಸೋಮಯಾಜಿ ಗಂಧದ ಸಸಿಯನ್ನು ನೆಡುವ ಮೂಲಕ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಹಾಗೂ ವೃಕ್ಷಾರೋಪಣೆಯ ಮಹತ್ವವನ್ನು ತಿಳಿಸಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಬೇಕೆಂದರು.

ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಸಮಿತಿಯ ಸದಸ್ಯರು, ಕ್ಷೇತ್ರದ ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿ, ಔಷಧೀಯ ಸಸಿಗಳು, ನೆರಳು ನೀಡುವ ಉತ್ತಮ ಮರಗಳು, ಹಣ್ಣಿನ ಗಿಡಗಳು ಹಾಗೂ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿ ನೆಟ್ಟಿರುವ ಸಸಿಗಳನ್ನು ಸಂರಕ್ಷಿಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳುವುದಾಗಿ ಸಂಕಲ್ಪ ಮಾಡಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments