ಹೆಬ್ರಿ : ಹೆಬ್ರಿ ತಾಲ್ಲೂಕಿನಲ್ಲಿ ನೂತನವಾಗಿ ರೆಡ್ ಕ್ರಾಸ್ ಸೊಸೈಟಿಯನ್ನು ಸ್ಥಾಪಿಸಲು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾ ಭವನದಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಚೆರ್ಮೇನ್ ಡಾ. ಅಶೋಕ್ ಕುಮಾರ್ ವೈ. ಜಿ ಮತ್ತು ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಅವರು ರೆಡ್ ಕ್ರಾಸ್ ಸೊಸೈಟಿಯ ಬಗ್ಗೆ ಸಮಗ್ರ ಮಾಹಿತಿ ನೀಡಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಭಾರತದ ಪ್ರಮುಖ ಸ್ವಯಂಸೇವಾ, ಮಾನವೀಯ ಸೇವಾ ಸಂಸ್ಥೆಯಾಗಿದೆ. ಸಮಾಜ ಕಲ್ಯಾಣವನ್ನು ಮಾಡುವುದು ರೆಡ್ ಕ್ರಾಸ್ ಮುಖ್ಯ ಉದ್ದೇಶವಾಗಿದೆ. ಕನಿಷ್ಠ ಪಕ್ಷ 50 ಮಂದಿಯನ್ನು ಹೆಬ್ರಿ ತಾಲ್ಲೂಕಿನಲ್ಲಿ ಸಂಸ್ಥೆಗೆ ಸದಸ್ಯರನ್ನಾಗಿ ಸೇರಿಸಿ, ಎಲ್ಲರ ಸಹಕಾರ ಪಡೆದು ಅತೀ ಶೀಘ್ರವಾಗಿ ಹೆಬ್ರಿ ತಾಲ್ಲೂಕು ರೆಡ್ ಕ್ರಾಸ್ ಸೊಸೈಟಿ ಸ್ಥಾಪನೆಯಾಗಲಿ ಎಂದು ಹೇಳಿದರು.
ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಮಾರ್ಗದರ್ಶನದಲ್ಲಿ ವೀಣಾ ಆರ್. ಭಟ್ ವರಂಗ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವರಂಗ ವೀಣಾ ಆರ್. ಭಟ್ ರವರನ್ನು ಮೂರು ವರ್ಷದ ಅವಧಿಗೆ ಹೆಬ್ರಿ ತಾಲ್ಲೂಕು ಮಟ್ಟದ ರೆಡ್ ಕ್ರಾಸ್ ಸೊಸೈಟಿ ಚೇರ್ಮನ್ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಸಂಸ್ಥೆಯ ಚೇರ್ಮನ್ ವೀಣಾ ಆರ್ ಭಟ್, ವೈಸ್ ಚೇರ್ಮನ್ ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿಯಾದ ಪ್ರಶಾಂತ್ ಪೈ ಮುದ್ರಾಡಿ. ಕೋಶಾಧಿಕಾರಿಯಾದ ಪ್ರಕಾಶ ಶೆಟ್ಟಿ ಕಲ್ಲಿಲು ಅವರಿಗೆ ಶುಭ ಹಾರೈಸಲಾಯಿತು. ಹೆಬ್ರಿ ತಾಲ್ಲೂಕಿನ ವಿವಿಧ ಗ್ರಾಮಗಳ ಗಣ್ಯರು ಭಾಗವಹಿಸಿ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾಗಲು ಬಯಸಿದರು. ವಿವಿಧ ಪ್ರಮುಖರಾದ ಬಾಲಚಂದ್ರ ಮುದ್ರಾಡಿ, ಇಂದಿರಾ ಬಾಯರಿ ಮುದ್ರಾಡಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಪ್ರವೀಣ್ ಶೆಟ್ಟಿ, ಪಿ.ವಿ.ಆನಂದ ಸಾಲಿಗ್ರಾಮ, ಸುನೀತಾ ಅರುಣ್ ಹೆಗ್ಡೆ, ಸುರೇಶ ಪೂಜಾರಿ ವರಂಗ, ರಕ್ಷಿತಾ ಪಿ ಭಟ್, ಉದಯ ಸೇರಿಗಾರ್, ರಾಧಾಕೃಷ್ಣ ಕ್ರಮಧಾರಿ, ಸಂತೋಷ ಕುಮಾರ್ ಶೆಟ್ಟಿ ಮುದ್ರಾಡಿ, ಸುಕುಮಾರ್ ಮುನಿಯಾಲ್, ಹೆಬ್ರಿ ಜನಾರ್ಧನ್, ಮಂಜುನಾಥ ಕೆ ಶಿವಪುರ, ಸೋನಿ ಪಿ ಶೆಟ್ಟಿ, ಡಾ. ಸುಷ್ಮಾ ಆರ್ ಹೆಗ್ಡೆ, ಡಾ. ಭಾರ್ಗವಿ ಆರ್ ಐತಾಳ್, ಕೆ. ಬಾಲಚಂದ್ರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.
ನೂತನ ಚೇರ್ಮನ್ ವೀಣಾ ಆರ್. ಭಟ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಪೈ ವಂದಿಸಿದರು. ಕಬ್ಬಿನಾಲೆ ರಾಮಚಂದ್ರ ಭಟ್ ಸಹಕರಿಸಿದರು.



