ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಸುಬೇದಾರ್ ಮೇಜರ್ ಕ್ಯಾಪ್ಟನ್ ದಿನೇಶ್ ಶೆಟ್ಟಿ ಪೆರ್ಡೂರು ಅವರನ್ನು ಗೌರವಿಸಲಾಯಿತು.
ದಿನೇಶ ಶೆಟ್ಟಿ ಮಾತನಾಡಿ, ದೇಶದ ಸೇವೆಯನ್ನು ಸೈನಿಕನಾಗಿ ಮಾಡಿದ್ದು ಹೆಮ್ಮೆಯ ವಿಷಯ, ಸೈನಿಕ ವೃತ್ತಿಯಿಂದ ಶಿಸ್ತು ಮತ್ತು ತ್ಯಾಗವನ್ನು ಕಲಿತಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶದ ಸೇವೆಯನ್ನು ಸೈನಿಕನಾಗಿ ಮಾಡಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ವಹಿಸಿ ಮಾತನಾಡಿ, ಸೈನಿಕರು ವಿಷಮ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನ ಶ್ರೇಷ್ಠ ಕಾರ್ಯವಾಗಿದೆ. ಆದ್ದರಿಂದ ಸೇನೆಯ ಕೆಲಸ ದೇವರ ಕೆಲಸ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಶಕುಂತಲಾ ಮತ್ತು ಗುರುವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿನಿಯರಾದ ಅಧಿತಿ ಅಡಿಗ ನಿರೂಪಿಸಿ, ಅಭಿಷಾ ಸ್ವಾಗತಿಸಿ, ಹಿಮಾ ವಂದಿಸಿದರು.





