50 ಮಂದಿ ಸದಸ್ಯರು ಭಾಗಿ.
ಮುದ್ರಾಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹೆಬ್ರಿ ತಾಲ್ಲೂಕಿನ ಮುದ್ರಾಡಿ ವಲಯದ ಮಹಿಳಾ ಜ್ಞಾನವಿಕಾಸ ಕೇಂದ್ರಗಳಾದ ಭದ್ರಕಾಳಿ, ಸಿಂಧೂರ, ಅಭಿವೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಮಾತೃಶ್ರೀ ಡಾ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು.
ಪ್ರಥಮದಲ್ಲಿ ಕಾರ್ಕಳ ವಿನಾಯಕ ದೇವರ ದರ್ಶನವನ್ನು ಪಡೆದು ಬಳಿಕ ಕಾಪು ಸ್ವಉದ್ಯೋಗ ಕುಟುಂಬ ಭೇಟಿ ಮಾಡಿ ಸುಮಾರು 100 ಮಲ್ಲಿಗೆ ಗಿಡ ನಾಟಿ ಮಾಡಿ ಉತ್ತಮ ಆದಾಯವನ್ನು ಪಡೆಯುತ್ತಿರುವ ಶಶಿಕಲಾ ರವರ ಮನೆಗೆ ಭೇಟಿ ನೀಡಿ ಅವರಿಂದ ಸ್ವಉದ್ಯೋಗದ ಮಾಹಿತಿ ಪಡೆದು ಗಿಡಗಳನ್ನು ವೀಕ್ಷಿಸಲಾಯಿತು. ನಂತರ ಕಾಪು ಶ್ರೀ ಮಾರಿಯಮ್ಮ ದೇವಿ, ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನ, ಮಂಗಳೂರು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ದೇವರ ದರ್ಶನ ಪಡೆಯಲಾಯಿತು. ಬಳಿಕ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಅಲ್ಲಿ ಎಲ್ಲರೂ ಸೇರಿ ಭಜನೆ ಸೇವೆ ನೀಡಿ ಬಪ್ಪನಾಡು ದೇವಸ್ಥಾನದ ದೇವರ ದರ್ಶನ ಪಡೆಯಲಾಯಿತು. 50 ಮಂದಿ ಸದಸ್ಯರು ೧ ದಿನದ ಕ್ಷೇತ್ರ ಅಧ್ಯಯನ ಪ್ರವಾಸ ಭಾಗಿಯಾದರು.



