ಮಕ್ಕಳು ಟಿವಿ, ಮೊಬೈಲ್ ಜಾಸ್ತಿ ನೋಡೋದರಿಂದ, ನಿದ್ದೆ ಕಡಿಮೆ ಆಗೋದರಿಂದ ಉದಾಸೀನ ಮತ್ತು ಏಕಾಗ್ರತೆ ಕಡಿಮೆ ಆಗುತ್ತದೆ ಪ್ರಾಣಾಯಾಮದಿಂದ ಮೆದುಳಿಗೆ ಆಮ್ಲಜನಕ ಜಾಸ್ತಿ , ಹೋಗುವುದರಿಂದ ಮಗು ಚಟುವಟಿಕೆ ಮತ್ತು ಉತ್ಸಾಹಭರಿತವಾಗಿ ಕೆಲಸವನ್ನು ಮಾಡುತ್ತದೆ.
ಮಕ್ಕಳಿಗೆ ಸೂಕ್ತವಾದ 3 ಪ್ರಾಣಾಯಾಮ
ಭ್ರಮರಿ ಪ್ರಾಣಾಯಾಮ / ಜೇನುನೊಣ ಉಸಿರು
ನೆನಪಿನ ಶಕ್ತಿ ಹೆಚ್ಚಾಗಿಕೆಲಸದ ಮೇಲೆ ಫೋಕಸ್ ಮಾಡಲು ಮತ್ತು ಒತ್ತಡವನ್ನು ಕಮ್ಮಿ ಮಾಡಲು ಸಹಕರಿಸುತ್ತದೆ.
ಹೇಗೆ ಮಾಡಿಸುವುದು:
1. ಕಣ್ಣು ಮುಚ್ಚಿ ಆರಾಮವಾಗಿ ಕೂರಿಸಿ
2. ಎರಡೂ ಕಿವಿಯನ್ನು ಹೆಬ್ಬೆರಳಿನಿಂದ ಮುಚ್ಚಿಸಿ
3. ಆಳವಾಗಿ ಉಸಿರು ಒಳಗೆ
4. “ಮ್ಮ್ಮ್ಮ್…” ಎಂದು ಜೇನುನೊಣದ ಹಾಗೆ ಶಬ್ದ ಮಾಡುತ್ತಾ ಉಸಿರು ಹೊರಗೆ ಬಿಡಿರಿ.
5. ದಿನಕ್ಕೆ 5 ಬಾರಿ ಮಾತ್ರ. ಆಟದ ಹಾಗೆ ಮಾಡಿಸಿ ಪೋಷಕರು ಮಕ್ಕಳೊಂದಿಗೆ ದಿನಾಲು ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಿದರೆ ಮಕ್ಕಳು ಇದನ್ನು ಅನುಸರಿಸುತ್ತಾರೆ.
ಲಾಭ: ಓದಿನಲ್ಲಿ ಗಮನ, ಪರೀಕ್ಷೆಯ ಭಯ ಕಡಿಮೆ ಕಡಿಮೆಯಾಗಿ ಒತ್ತಡ ನಿರ್ವಹಣೆ ಯಾಗುತ್ತದೆ.
B. ಕಪಾಲಭಾತಿ – ಮಕ್ಕಳ
_ಸುಸ್ತು ದೂರ ಮಾಡಿ ಉತ್ಸಾಹ ದಿಂದ ಕೆಲಸವನ್ನು ಮಾಡುತ್ತಾರೆ .
ಹೇಗೆ ಮಾಡಿಸುವುದು:
1. ಬೆನ್ನು ನೇರವಾಗಿ ಕೂರಿಸಿ
2. “ಹೊಟ್ಟೆಯನ್ನು ಬಲೂನ್ ತರ ಒಳಗೆ-ಹೊರಗೆ ಮಾಡು” ಅಂತ ಆಟದ ಹಾಗೆ ಹೇಳಿ
3. ಬೇಗ ಬೇಗ 10 ಬಾರಿ ಮಾತ್ರ ಮಾಡಿಸಿ. 3 ಸುತ್ತು
4. 8 ವರ್ಷದ ಮೇಲಿನ ಮಕ್ಕಳಿಗೆ ಮಾತ್ರ
ಲಾಭ: ಸೋಮಾರಿತನ ಹೋಗುತ್ತದೆ, ಜಾಗೃತಿ ಬರುತ್ತದೆ
C. ಅನುಲೋಮ ವಿಲೋಮ
_ಎರಡೂ ಮೆದುಳು ಬ್ಯಾಲೆನ್ಸ್ ಮಾಡಲು ಸಹಕರಿಸುತ್ತದೆ
ಹೇಗೆ ಮಾಡಿಸುವುದು:
1. ಬಲಗೈನಿಂದ ಮೂಗು ಹಿಡಿಯಲು ಹೇಳಿ
2. ಒಂದು ಮೂಗಿನಿಂದ ಉಸಿರು ಒಳಗೆ, ಇನ್ನೊಂದರಿಂದ ಹೊರಗೆ
3. ದಿನಕ್ಕೆ 3 ನಿಮಿಷ ಸಾಕು. ಕಥೆ ಹೇಳುತ್ತಾ ಮಾಡಿಸಿ
ಲಾಭ: ಕೋಪ ,ಸಿಟ್ಟು ಕಮ್ಮಿಯಾಗಿ/ಉದಾಸೀನ ಕಡಿಮೆ ಆಗುತ್ತದೆ.
2. 10 ನಿಮಿಷ ಬೆಳಗ್ಗೆ ನಿರಂತರವಾಗಿ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕಾಗುತ್ತದೆ
ಸಮಯ: ಬೆಳಗ್ಗೆ ಸ್ಕೂಲ್ ಹೋಗೋ ಮೊದಲು
1. 2 ನಿಮಿಷ – ನಗುತ್ತಾ ಕೈ-ಕಾಲು ಆಡಿಸುವುದು
2. 3 ನಿಮಿಷ – ಕಪಾಲಭಾತಿ 10×3 ಸುತ್ತು
3. 3 ನಿಮಿಷ – ಭ್ರಮರಿ 5 ಬಾರಿ
4. 2 ನಿಮಿಷ – “ನಾನು ಆಕ್ಟಿವ್ ಆಗಿದ್ದೇನೆ, ನಾನು ಸಂತೋಷದಿಂದಿದ್ದೇನೆ, ನನ್ನೆಲ್ಲಾ ಕೆಲಸವನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸುತ್ತೇನೆ, ಹೀಗೆ ಐದಾರು ಬಾರಿ ಸಂಕಲ್ಪವನ್ನು ಮಾಡಿಕೊಳ್ಳಿರಿ .
3. 4 ಮುಖ್ಯ ನಿಯಮ ಮಕ್ಕಳಿಗೆ
1. ಆಟದ ಹಾಗೆ ಮಾಡಿಸಿ – “ಯೋಗ” ಅಂತ ಒತ್ತಡವನ್ನು ಮಾಡಬೇಡಿ
2. ಖಾಲಿ ಹೊಟ್ಟೆ – ಬೆಳಗ್ಗೆ ಹಲ್ಲುಜ್ಜಿದ ಮೇಲೆ3. ಪೋಷಕರುಮಕ್ಕಳ ಜೊತೆಗೆ ಪ್ರಾಣಾಯಾಮವನ್ನು ಅಭ್ಯಾಸ ಮಾಡಿರಿ – ನೀವು ಮಾಡಿದರೆ ಮಗು ಅನುಕರಣೆ ಮಾಡುತ್ತದೆ.
4. 10 ನಿಮಿಷಕ್ಕಿಂತ ಜಾಸ್ತಿ ಬೇಡ – ಬೇಜಾರಾಗುತ್ತದೆ
4. ಯಾರು ಮಾಡಬಾರದು?
– 5 ವರ್ಷದ ಕೆಳಗೆ: ಕಪಾಲಭಾತಿ ಬೇಡ
-ಅಸ್ತಮ ಮತ್ತು ಹೃದಯದ ಸಮಸ್ಯೆ ಇದ್ದ ಮಕ್ಕಳು ಮಾಡುವುದು ಬೇಡ ಸೂಕ್ತ ವೈದ್ಯರಲ್ಲಿ ಸಲಹೆಯನ್ನು ಪಡೆದುಕೊಳ್ಳಿ .
– ಜ್ವರ/ಶೀತ ಇದ್ದಾಗ: ನಿಲ್ಲಿಸಿ
5. ಪ್ರಾಣಾಯಾಮ ಜೊತೆ ಈ 2 ಸಹಾಯ ಮಾಡುತ್ತದೆ
1. ನಿದ್ದೆ: ರಾತ್ರಿ 9ಕ್ಕೆ ಮಲಗಿಸಿ, 8-9 ಗಂಟೆ ನಿದ್ದೆ
2. ಸ್ಕ್ರೀನ್ ಟೈಮ್: ದಿನಕ್ಕೆ 1 ಗಂಟೆಗಿಂತ ಕಡಿಮೆ Mobile/TV
ನೆನಪಿಡಿ: 21 ದಿನ regular ಮಾಡಿದರೆ ಮಗುವಿನಲ್ಲಿ ಬದಲಾವಣೆ ಕಾಣಿಸುತ್ತದೆ. ಶಕ್ತಿ + ಗಮನ ಎರಡೂ ಹೆಚ್ಚಾಗುತ್ತದೆ .
-ಡಾ. ಮಾಲತಿ ಪೈ
Msc in yoga mphil phd
ವಿನ್ಯಾಸ ಯೋಗ ರಿಜಿಸ್ಟರ್ ಟ್ರಸ್ಟ್.


