Thursday, September 24, 2026
Homeಮುದ್ರಾಡಿ ಗ್ರಾಮ ಪಂಚಾಯತ್‌ಸಂಪೂರ್ಣ ಹಾಳಾದ ಮುದ್ರಾಡಿ ಬಲ್ಲಾಡಿ ಕಾಂತ್ರಬೈಲು ರಸ್ತೆ: ಸ್ಥಳೀಯರಿಂದ ದುರಸ್ತಿ ಕಾರ್ಯ.

ಸಂಪೂರ್ಣ ಹಾಳಾದ ಮುದ್ರಾಡಿ ಬಲ್ಲಾಡಿ ಕಾಂತ್ರಬೈಲು ರಸ್ತೆ: ಸ್ಥಳೀಯರಿಂದ ದುರಸ್ತಿ ಕಾರ್ಯ.

ಪ್ರೋತ್ಸಾಹ ನೀಡಿದ ಗಣಪತಿ ಮುದ್ರಾಡಿ ಅವರಿಗೆ ಕೃತಜ್ಞತೆ .

ಮುದ್ರಾಡಿ :ಮುದ್ರಾಡಿ ಬಲ್ಲಾಡಿ ಕಾಂತ್ರಬೈಲು ರಸ್ತೆ ಹಾಳಾಗಿದ್ದು ಸಂಚಾರಕ್ಕೆ ತುಂಬಾ ತೊಂದರೆ ಆಗುತಿತ್ತು.ಭಾನುವಾರ ಸ್ಥಳೀಯರಾದ ಶ್ಯಾಮ ಶೆಟ್ಟಿ, ಪ್ರೀತಿ ಶೆಟ್ಟಿ, ಪ್ರದೀಪ್ ಕೆಪಿ,ಸುದರ್ಶನ್ ಶೆಟ್ಟಿ, ಸುರೇಶ ಶೆಟ್ಟಿ ಹಾಗೂ ಇತರರು ಶ್ರಮದಾನದ ಮೂಲಕ ರಸ್ತೆ ಸಂಚಾರಕ್ಕೆ ಆಗುವ ಹಾಗೆ ದುರಸ್ಥಿ ಮಾಡಿದರು.

ಶ್ರಮದಾನಕ್ಕೆ ಪ್ರೋತ್ಸಾಹ ನೀಡಿದ ಹಿರಿಯರಾದ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಗಣಪತಿ ಮುದ್ರಾಡಿ ಅವರಿಗೆ ತಂಡವು ಕೃತಜ್ಞತೆ ಸಲ್ಲಿಸಿದೆ.

ಕೆಸರುಮಯವಾಗಿದ್ದ ರಸ್ತೆಯನ್ನು ಶ್ರಮದಾನದ ಮೂಲಕ ಸಂಚಾರಕ್ಕೆ ಯೋಗ್ಯಗೊಳಿಸಿದ ಸ್ಥಳೀಯರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!